ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಸ್ವಯಂಪ್ರೇರಿತ ಬಂದ್
- ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಸ್ವಯಂಪ್ರೇರಿತ ಬಂದ್
- ಭಾಗಶಃ ಯಶಸ್ವಿ, ಅಂಗಡಿ - ಮುಂಗಟ್ಟುಗಳನ್ನ ಮುಚ್ಚಿ ವ್ಯಾಪಾರಸ್ಥರಿಂದ ಬೆಂಬಲ
- ಆಟೋ, ಬಸ್ ಸಂಚಾರ ಸಂಪೂರ್ಣ ಸ್ಥಗಿತ
ಚಿಕ್ಕಮಗಳೂರು (ಅ. 24): ನಮಗೆ ನಿಮ್ಮ ಹಣ ಬೇಡ, ನಿಮ್ಮ ರೆಕಮಂಡೇಷನ್ ಬೇಡ. ನಮಗೊಂದು ಸುಸಜ್ಜಿತ ಆಸ್ಪತ್ರೆ ಕಟ್ಟಿಸಿಕೊಡಿ ಅನ್ನೋದು ಶೃಂಗೇರಿ (Sringeri) ಜನರ ದಶಕದ ಬೇಡಿಕೆ. ಆದ್ರೆ ಜನಪ್ರತಿನಿಧಿಗಳು ಮಾತ್ರ ನೋಡೋಣ, ಮಾಡೋಣ ಎನ್ನುತ್ತಲೇ ಸಮಯ ದೂಡುತ್ತಿದ್ದರು. ಇದರಿಂದ ಬೇಸತ್ತ ಜನ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಶೃಂಗೇರಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಡೀ ಪಟ್ಟಣವೇ ಸಂಪೂರ್ಣ ಸ್ಥಬ್ಧವಾಗಿತ್ತು.
ಅಡಿಕೆಗೆ ಎಲೆಚುಕ್ಕಿ ರೋಗ, ಇಡೀ ಮರವೇ ನಾಶ, ಆತಂಕದಲ್ಲಿ ರೈತರು
ವಿವಿಧ ರಾಜಕೀಯ ಪಕ್ಷಗಳು, ಅನೇಕ ಸಂಘಟನೆಗಳು, ರೈತರು, ವರ್ತಕರು, ಬ್ಯಾಂಕ್ ನೌಕರರು, ಆಟೋ-ಬಸ್ ಚಾಲಕರು ಮುಖ್ಯವಾಗಿ ಶೃಂಗೇರಿಯ ನಾಗರೀಕರು ಬಂದ್‌ಗೆ (Protest) ಸಂಪೂರ್ಣ ಬೆಂಬಲ ನೀಡಿದರು. ಇದಕ್ಕೆ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕ ಹಿನ್ನೆಲೆಯಲ್ಲಿ ಸುಸಜ್ಜಿತ 100 ಬೆಡ್ ಸರ್ಕಾರಿ ಆಸ್ಪತ್ರೆ ಹೋರಾಟಕ್ಕೆ ರೆಕ್ಕೆ ಪುಕ್ಕ ಬಂದಂತಾಗಿದೆ. ಒಟ್ಟಿನಲ್ಲಿ ಸರ್ಕಾರವೇ ಮಾಡಬೇಕಾದ ಕರ್ತವ್ಯವನ್ನ ಜನಸಾಮಾನ್ಯರೇ ಹೋರಾಟ ಮಾಡಿ ಕೇಳಿದ್ದಾಗಿದೆ.