ಯೇಸು ಹೊಗಳಿಕೆ..ಹಿಂದೂ ದೇವರುಗಳ ಬಗ್ಗೆ ಅಶ್ಲೀಲ ಮಾತು: ವ್ಯಕ್ತಿಯ ವಿಡಿಯೋ ವೈರಲ್‌

ಉತ್ತರ ಕನ್ನಡದಲ್ಲಿ ಮತ್ತೊಂದು ಧರ್ಮ ಸಂಘರ್ಷ ನಡೆದಿದೆ. ವ್ಯಕ್ತಿಯೊಬ್ಬ ಯೇಸು ಹೊಗಳಿದ್ದು, ಹಿಂದೂ ದೇವತೆಗಳಿಗೆ ಅಶ್ಲೀಲವಾಗಿ ಮಾತನಾಡಿದ್ದಾನೆ. ದಲಿತ ವ್ಯಕ್ತಿಯ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ದಲಿತ ಸಂಘಟನೆಗಳೇ ಹೋರಾಟಕ್ಕಿಳಿದಿವೆ.

First Published Sep 1, 2023, 11:03 AM IST | Last Updated Sep 1, 2023, 11:03 AM IST

ಇದೊಂದು ಮಾತು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ವ್ಯಕ್ತಿ ಆಡಿದ ಮಾತು ಹಿಂದೂಗಳ ಸಿಟ್ಟಿಗೆ ಕಾರಣವಾಗಿದೆ. ಕರ್ನಾಟಕದ ಕರಾವಳಿ ಅಂದ್ರೆ ಧರ್ಮ ವಿಷಯದಲ್ಲಿ ಸೂಕ್ಷ್ಮ ಪ್ರದೇಶ. ಧರ್ಮದ ವಿಚಾರದಲ್ಲಿ ದೊಡ್ಡ ರದ್ದಾಂತಗಳೇ ನಡೆದು ಹೋಗಿದೆ. ಆದ್ರೆ ತಾನು ಹಿಂದೂ ಅಂತಾ ಹೇಳಿಕೊಳ್ಳುವ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷನೇ ಹಿಂದೂ ದೇವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಕಾರವಾರದ(Karwar) ಹರಿದೇವ ನಗರದ ನಿವಾಸಿ ಎಲಿಷಾ ಪಾಟಿ(Elisha Pati) ಹಿಂದೂ ದೇವತೆಗಳ ಬಗ್ಗೆ ನಾಲಿಗೆ ಹರಿಬಿಟ್ಟು ವಿಕೃತಿ ಮೆರೆದಿದ್ದಾನೆ ಅನ್ನೋದು ಆರೋಪ. ಯೇಸು ಮಾತ್ರ ದೇವರು, ಹಿಂದೂ ದೇವರು ಯಾವುದು ದೇವರಲ್ಲ ಅಂದಿದ್ದಾನಂತೆ. ಎಲಿಷಾ ಪಾಟಿ ಹೇಳಿಕೆ ಹಿಂದೂಗಳನ್ನ(Hindus) ಕೆರಳಿಸಿದೆ. ಕೂಡಲೇ ಈ ವ್ಯಕ್ತಿಯನ್ನ ಬಂಧಿಸುವಂತೆ ದಲಿತ ಸಂಘಟನೆಗಳೇ ಬೀದಿಗಿಳಿದು ಆಗ್ರಹಿಸುತ್ತಿವೆ. ಅಷ್ಟೇ ಅಲ್ಲ ಪೊಲೀಸರಿಗೆ ದೂರು ನೀಡಿ, ಆತನ ಗಡಿಪಾರಿಗೆ ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲ ಈತ ದಲಿತರನ್ನು ಹಿಂದೂ ಧರ್ಮದಿಂದ ಕ್ರಿಶ್ಚಿಯನ್(Christian) ಧರ್ಮಕ್ಕೆ ಮತಾಂತರ ನಡೆಸುವ ಪ್ರಯತ್ನ ಕೂಡ ನಡೆಸುತ್ತಿದ್ದಾನೆ ಅನ್ನೋ ಆರೋಪವೂ ಇದೆ. ಸಹಾಯದ ನೆಪದಲ್ಲಿ, ಅಧಿಕಾರಿಗಳ ಹೆಸರಿನಲ್ಲಿ ದಲಿತರಿಂದ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. 

ಇದನ್ನೂ ವೀಕ್ಷಿಸಿ:  ಕೊಲ್ಲೂರಿಗೆ ಕೇರಳ ಭಕ್ತರ ಆಗಮನ.. ಜನರಲ್ಲಿ ಆತಂಕ: ಆಫ್ರಿಕನ್ ಫೀವರ್ ಬಾಧಿಸುವ ಭೀತಿ !