Haveri: ಹಾವೇರಿಯಲ್ಲಿ ರೌಡಿಗಳ ಪರೇಡ್‌: ರೌಡಿಗಳಿಗೆ ಗಡಿಪಾರು ಎಚ್ಚರಿಕೆ ನೀಡಿದ ಎಸ್.ಪಿ

ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೌಡಿಗಳ ಪರೇಡ್‌ ನಡೆಸಿದ್ದು, ಈ ವೇಳೆ ಗೂಂಡಾಗಳ ಮೈಚಳಿ ಬಿಡಿಸಿದ್ದಾರೆ.

First Published Feb 19, 2023, 11:38 AM IST | Last Updated Feb 19, 2023, 11:38 AM IST

ಹಾವೇರಿ ಜಿಲ್ಲೆಯಲ್ಲಿ ರೌಡಿಗಳ ಪರೇಡ್ ನಡೆಸಲಾಗಿದ್ದು, ಈ ವೇಳೆ ಎಸ್.ಪಿ ಗುಣಾರೆ ಕ್ರಿಮಿನಲ್ಲಿ ಆಕ್ಟಿವ್‌ ಆಗಿದ್ದವರಿಗೆ ಗಡಿ ಪಾರು ಎಚ್ಚರಿಕೆ ನೀಡಿದ್ದಾರೆ. ಹಾವೇರಿ ನೂತನ ಎಸ್‌ ಪಿ ಡಾ. ಶಿವಕುಮಾರ್‌ ಗುಣಾರೆ ಖಡಕ್‌ ವಾರ್ನಿಂಗ್‌ ನೀಡಿದ್ದು, ಶಿಗ್ಗಾವಿ ಪೊಲೀಸ್‌ ಠಾಣೆ ಆವರಣದಲ್ಲಿ ರೌಡಿಗಳ ಪರೇಡ್‌ ನಡೆಸಲಾಗಿದೆ. ನಾಲ್ಕು ಠಾಣೆಯ 86 ಜನ ರೌಡಿ ಶೀಟರ್‌ಗಳಿಗೆ ಎಸ್.ಪಿ ಕ್ಲಾಸ್‌ ತೆಗೆದುಕೊಂಡಿದ್ದು, ಶಿಗ್ಗಾಂವಿ, ಹಲಗೂರು, ಬಂಕಾಪುರ ಹಾಗೂ ತಡಸ ವ್ಯಾಪ್ತಿಯ ರೌಡಿಗಳ ಪರೇಡ್‌ ನಡೆಸಲಾಗಿದೆ. ಸ್ಥಳದಲ್ಲಿ ಅಧಿಕ ಪ್ರಸಂಗತನ ನಡೆಸಿದ ರೌಡಿಗಳಿಗೆ ವಾರ್ನಿಂಗ್‌ ಮಾಡಲಾಗಿದೆ.

Video Top Stories