ರಾಯಚೂರಲ್ಲೊಬ್ಬ ಕೋತಿಗಳ ಪ್ರೇಮಿ : ನಿತ್ಯವೂ ಹತ್ತಾರು ಕೋತಿಗಳಿಗೆ ಆಹಾರ ನೀಡುವ ವ್ಯಕ್ತಿ

ಗೂಡು ಅಂಗಡಿ ಇಟ್ಟುಕೊಂಡು ಜೀವನ ನಡೆಸುವ ಶಾಂತಯ್ಯ ಸ್ವಾಮಿ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣ ಶಾಸಕರ ಕಚೇರಿ ಬಳಿ ಕಾಣಸಿಗುತ್ತಾರೆ. ಇವರಿಗೆ ಈ ಚಿಕ್ಕ ಅಂಗಡಿಯೇ ಜೀವನಾಧಾರ ಈ ಶಾಂತಯ್ಯ ಸ್ವಾಮಿಗೆ ಕೋತಿಗಳೆಂದರೆ ಎಲ್ಲಿಲ್ಲದ ಪ್ರೀತಿ.  ನಿತ್ಯವೂ ಇಲ್ಲಿ ಅನೇಕ ಕೋತಿಗಳು ಬರುತ್ತವೆ. ಅವುಗಳಿಗೆ ವಿವಿಧ ರೀತಿಯ ಆಹಾರ ನೀಡುತ್ತಾರೆ. 

ಅವುಗಳಿಗೆ ಯಾವುದೇ ಭಯವಿಲ್ಲದೆ ಅಹಾರ ನೀಡುತ್ತಾರೆ. ಸುಮಾರು 20 - 30 ಕ್ಕೂ ಹೆಚ್ಚು ಕೋತಿಗಳು ಬರುತ್ತವೆ ಎನ್ನುತ್ತಾರೆ ಸ್ಥಳೀಯರು. ಅನೇಕ ವರ್ಷಗಳಿಂದಲೂ ಇದು ನಡೆಯುತ್ತದೆ ಎನ್ನುತ್ತಾರೆ. ಇನ್ನು ಹಾವು ಹಿಡಿಯುವುದರಲ್ಲಿಯೂ ಶಾಂತಯ್ಯ ಸ್ವಾಮಿ ನಿಪುಣರು. 

First Published Nov 11, 2021, 9:56 AM IST | Last Updated Nov 11, 2021, 9:56 AM IST

ರಾಯಚೂರು (ನ.11): ಗೂಡು ಅಂಗಡಿ ಇಟ್ಟುಕೊಂಡು ಜೀವನ ನಡೆಸುವ ಶಾಂತಯ್ಯ ಸ್ವಾಮಿ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣ ಶಾಸಕರ ಕಚೇರಿ ಬಳಿ ಕಾಣಸಿಗುತ್ತಾರೆ. ಇವರಿಗೆ ಈ ಚಿಕ್ಕ ಅಂಗಡಿಯೇ ಜೀವನಾಧಾರ ಈ ಶಾಂತಯ್ಯ ಸ್ವಾಮಿಗೆ ಕೋತಿಗಳೆಂದರೆ ಎಲ್ಲಿಲ್ಲದ ಪ್ರೀತಿ.  ನಿತ್ಯವೂ ಇಲ್ಲಿ ಅನೇಕ ಕೋತಿಗಳು ಬರುತ್ತವೆ. ಅವುಗಳಿಗೆ ವಿವಿಧ ರೀತಿಯ ಆಹಾರ ನೀಡುತ್ತಾರೆ. 

'ಶ್ರೀರಾಮು'ಲು ಹೆಗಲೇರಿದ ಹನುಮ: ವಾನರ ಸೈನ್ಯದೊಂದಿಗೆ ಸಚಿವರು

ಇಲ್ಲಿ ಬರುವ ಕೋತಿಗಳಿಗೆ  ಯಾವುದೇ ಭಯವಿಲ್ಲದೆ ಅಹಾರ ನೀಡುತ್ತಾರೆ ಶಾಂತಯ್ಯ ಸ್ವಾಮಿ. ಸುಮಾರು 20 - 30 ಕ್ಕೂ ಹೆಚ್ಚು ಕೋತಿಗಳು ಬರುತ್ತವೆ ಎನ್ನುತ್ತಾರೆ ಸ್ಥಳೀಯರು. ಅನೇಕ ವರ್ಷಗಳಿಂದಲೂ ಇದು ನಡೆಯುತ್ತದೆ ಎನ್ನುತ್ತಾರೆ. ಇನ್ನು ಹಾವು ಹಿಡಿಯುವುದರಲ್ಲಿಯೂ ಶಾಂತಯ್ಯ ಸ್ವಾಮಿ ನಿಪುಣರು. ಕೋತಿಗಳು ಮಾತ್ರವಲ್ಲದೇ ಹಸುಗಳಿಗೂ ಆಹಾರವನ್ನು ನೀಡುತ್ತಾ ಪ್ರಾಣಿ ಪ್ರೀತಿ ಮೆರೆಯುವ ಶಾಂತ್ತಯ್ಯ ಚಿಕ್ಕ ಅಂಗಡಿಯಿಂದಲೇ ಜೀವನ ನಡೆಸಿಕೊಂಡು ಮಾದರಿಯಾಗಿದ್ದಾರೆ.