'ಶ್ರೀರಾಮು'ಲು ಹೆಗಲೇರಿದ ಹನುಮ: ವಾನರ ಸೈನ್ಯದೊಂದಿಗೆ ಸಚಿವರು
* ರಾಜಕೀಯ ಜಂಜಾಟದಿಂದ ಶ್ರೀರಾಮುಲು ಕೊಂಚ ರಿಲೀಫ್
* ವಾನರ ಸೈನ್ಯದೊಂದಿಗೆ ಕಾಲಕಳೆದ ಸಾರಿಗೆ ಸಚಿವ ಶ್ರೀರಾಮುಲು
* ಈ ವೇಳೆ ಶ್ರೀರಾಮುಲು ಹೆಗಲೇರಿದ ಹನುಮ
ಕೊಪ್ಪಳ, (ಅ.26): ಸಾರಿಗೆ ಸಚಿವ ಶ್ರೀರಾಮುಲು (Sriramulu) ಅವರು ಇಂದು (ಅ.26) ಕೊಪ್ಪಳ (Koppal) ಜಿಲ್ಲೆಯ ಪಂಪ ಸರೋವರಕ್ಕೆ ಭೇಟಿ ನೀಡಿದರು.
ವೇಳೆ ಸಾರಿಗೆ ಸಚಿವ ಶ್ರೀರಾಮುಲು ಅವರು ಕೆಲಕಾಲ ಕೋತಿಗಳೊಂದಿಗೆ (Monkeys) ಕಾಲ ಕಳೆದಿದ್ದಾರೆ. ಕೋತಿಗಳಿಗೆ ಶ್ರೀ ರಾಮುಲು ಬಾಳೆಹಣ್ಣು ತಿನಿಸಿದ್ದಾರೆ. ಈ ವೇಲೆ ಕೋತಿಗಳು ಶ್ರೀರಾಮುಲು ಹೆಗಲೇರಿ ಆಟ ಆಡಿವೆ. ಇನ್ನು ಬಾಳೆಹಣ್ಣು ನೀಡುತ್ತಿರುವ ಕಂಡು ಕೋತಿಗಳ ಹಿಂಡೇ ಶ್ರೀರಾಮುಲು ಅವರನ್ನ ಸುತ್ತುಹೊರೆದವು. ಅವೆಲ್ಲವುಗಳಿಗೂ ಶ್ರೀರಾಮುಲು ಅವರು ಬಾಳೆಹಣ್ಣು ಹಂಚಿ ಸಂತಸಪಟ್ಟರು.
ಇನ್ನು ಇದೇ ವೇಳೆ ತಮ್ಮ ಹೆಗಲೇರಿ ಕೂತ ಕೋತಿಯೊಂದು ಅಲ್ಲೇ ಬಾಳೆಹಣ್ಣು ಸವಿಯುತ್ತಿರುವ ಫೋಟೋವನ್ನು ಶ್ರೀರಾಮುಲು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ಕೊಪ್ಪಳ ಜಿಲ್ಲೆಯ ಪಂಪ ಸರೋವರಕ್ಕೆ ಭೇಟಿ ನೀಡಿದ ವೇಳೆ ವಾನರ ಸೈನ್ಯಕ್ಕೆ ಬಾಳೆ ಹಣ್ಣು ನೀಡಿ, ವಾನರ ಸೈನ್ಯದೊಂದಿಗೆ ಕೆಲ ಸಮಯ ಕಳೆದಿದ್ದು. ನನ್ನ ಜೀವನದ ಅವಿಸ್ಮರಣೀಯ ಕ್ಷಣ. ಈ ವೇಳೆ ಮರಿ ವಾನರಗಳು ತಲೆಯ ಮೇಲೆ ಕುಳಿತು ಆಶೀರ್ವಾದ ನೀಡಿದ್ದನ್ನು ನಾನು ಎಂದು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಶ್ರೀರಾಮುಲು ಅವರು ಇಷ್ಟು ದಿನ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ (By Election) ಪ್ರಚಾರದಲ್ಲಿ ಪಾಲ್ಗೊಂಡಿದ್ರು. ಮಂಗಳವಾರ ಕೊಂಚ ಬಿಡುವ ಮಾಡಿಕೊಂಡು ಕೊಪ್ಪಳ ಜಿಲ್ಲೆಯ ಪಂಪ ಸರೋವರಕ್ಕೆ ಭೇಟಿ ನೀಡಿರುವುದು ವಿಶೇಷ.