ನನಗೆ ತಾಯಿ ಆಶೀರ್ವಾದ ಜೊತೆ ಇದೆ, ತಂದೆ ಆಶೀರ್ವಾದ ಸ್ವಲ್ಪ ಕಡಿಮೆ: ವೈರಲ್‌ ಆದ ಶಿವಾನಂದ ಪಾಟೀಲ್ ಹೇಳಿಕೆ

ತಾಯಿಯ ಜಾಗದಲ್ಲಿ ಮುಸ್ಲಿಂ ಇದ್ದಾರೆ, ತಂದೆ ಆಶೀರ್ವಾದ ಹಂಚಿಹೋಗಿದೆ, ನಾನು ಅದನ್ನು ಒಗ್ಗೂಡಿಸುವ ಅವಶ್ಯಕತೆ ಇದೆ, ರಾಕ್ಷಸ ಆಡಳಿತ ವಿರುದ್ಧ ಗೆಲ್ಲುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದೇನೆ ಎಂದು ಶಿವಾನಂದ ಪಾಟೀಲ್ ಹೇಳಿಕೆ ನೀಡಿದ್ದಾರೆ.
 

Share this Video
  • FB
  • Linkdin
  • Whatsapp

ನನಗೆ ತಾಯಿಯ ಆಶೀರ್ವಾದ ನನ್ನ ಜೊತೆ ಇದೆ, ತಂದೆಯ ಆಶೀರ್ವಾದ ಸ್ವಲ್ಪ ಕಡಿಮೆ ಇದೆ ಎಂದು ಸಚಿವ ಜಮೀರ್ ಅಹ್ಮದ್ (Zameer Ahmed) ನೇತೃತ್ವದ ಲೋಕಸಭಾ ಚುನಾವಣೆ ಸಂಬಂಧದ ಪ್ರಚಾರ ಸಭೆಯಲ್ಲಿ ಶಿವಾನಂದ ಪಾಟೀಲ್ (Shivanand Patil) ಹೇಳಿಕೆ ನೀಡಿದ್ದು, ಮುಸ್ಲಿಂ(Muslim) ಸಮುದಾಯದ ಸಮಾವೇಶದಲ್ಲಿ ಹೇಳಿಕೆ ವೈರಲ್ ಆಗಿದೆ. ಅಲ್ಲದೆ ತಾಯಿಯ ಜಾಗದಲ್ಲಿ ಮುಸ್ಲಿಂ ಇದ್ದಾರೆ, ತಂದೆ ಆಶೀರ್ವಾದ ಹಂಚಿಹೋಗಿದೆ, ನಾನು ಅದನ್ನು ಒಗ್ಗೂಡಿಸುವ ಅವಶ್ಯಕತೆ ಇದೆ, ರಾಕ್ಷಸ ಆಡಳಿತ ವಿರುದ್ಧ ಗೆಲ್ಲುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಗೆಲುವು ನಮ್ಮ ಗೆಲುವು ಅಲ್ಲ, ಅದು ಜಮೀರ್ ಅಹ್ಮದ್ ಗೆಲುವು, ನಿಮ್ಮೆಲ್ಲರ ಗೆಲುವು ಎಂದು ಪುತ್ರಿ ಸಂಯುಕ್ತಾ ಪಾಟೀಲ್ (Samyukta Patil) ಪರ ಪ್ರಚಾರ ಸಭೆಯಲ್ಲಿ ಶಿವಾನಂದ ಪಾಟೀಲ್ ಹೇಳಿದ್ದಾರೆ. ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಹಿಂದೆ ಈ ಸಭೆ ನಡೆದಿದ್ದು, ಇದೀಗ ಈ ಹೇಳಿಕೆ ಭಾರೀ ವೈರಲ್‌ ಆಗುತ್ತಿದೆ.

ಇದನ್ನೂ ವೀಕ್ಷಿಸಿ: ಮೊಮ್ಮಗನ ಪ್ರಕರಣದಿಂದ ಜರ್ಜರಿತರಾದ ದೇವೇಗೌಡರು! ದೊಡ್ಡಗೌಡರ ಫ್ಯಾಮಿಲಿ ಮೇಲೆ ಅಶ್ಲೀಲ ವ್ಯೂಹದ ಇಂಪ್ಯಾಕ್ಟ್ ಏನು?

Related Video