Asianet Suvarna News Asianet Suvarna News

ಕೊರೋನಾ ಆತಂಕ: ಮುಂಬೈನಿಂದ ಶಿರಸಿಗೆ ಬಂದಿದ್ದ ಚಾಲಕರು ಅರೆಸ್ಟ್‌

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಚಾಲಕರ ಬಂಧನ| ಕ್ವಾರಂಟೈನ್‌ಗೆ ಹೆದರಿ ತಪ್ಪಿಸಿಕೊಂಡಿದ್ದ ಚಾಲಕರು| ಮಹಾರಾಷ್ಟ್ರದ ಪುಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಶಿ ಪಟ್ಟಣಕ್ಕೆ ಬಂದಿದ್ದ ಚಾಲಕರು|

First Published May 21, 2020, 3:28 PM IST | Last Updated May 21, 2020, 3:28 PM IST

ಕಾರವಾರ(ಮೇ.21): ಕ್ವಾರಂಟೈನ್‌ಗೆ ಹೆದರಿ ತಪ್ಪಿಸಿಕೊಂಡಿದ್ದ ಚಾಲಕರನ್ನ ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಶಿ ಪಟ್ಟಣದಲ್ಲಿ ಇಂದು(ಗುರುವಾರ) ನಡೆದಿದೆ. ಚಾಲಕರು ಮಹಾರಾಷ್ಟ್ರದ ಪುಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಶಿ ಪಟ್ಟಣಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.

ವಲಸೆ ಕಾರ್ಮಿಕರ ದಂಡು: ಕಲಬುರಗಿ ಗಡಿಯಲ್ಲಿ ನೋಂದಣಿಗೆ ಮುಗಿಬಿದ್ದ ಜನರು

ಶಿರಸಿಯ ದೀವಗಿ ವಾರ್ನರ್‌ ಫ್ಯಾಕ್ಟರಿಗೆ ಸೇರಿದ ಚಾಲಕರು ಕ್ವಾರಂಟೈನ್‌ಗೆ ಹೆದರಿ ತಪ್ಪಿಸಿಕೊಂಡಿದ್ದರು. ಶಿರಸಿಯ ಕ್ವಾರಂಟೈನ್‌ ಕೇಂದ್ರದಲ್ಲಿದ್ದ 9 ಮಂದಿಗೆ ಕೊರೋನಾ ಸೋಂಕುನ ತಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  
 

Video Top Stories