ಶಿಕ್ಷಕಿ ಸ್ಕೂಟಿಯೊಳಗೆ ಸರ್ಪ! ಹಾವಿನ ಜೊತೆಗೆ 10 ಕಿ ಮೀ ಪಯಣ!

ಸ್ಕೂಟಿಯೊಳಗೆ ಸೇರಿಕೊಂಡ ಸರ್ಪದ ಜೊತೆ ಶಿಕ್ಷಕಿಯೊಬ್ಬರು 10 ಕಿ.ಮೀ ಪಯಣ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.   ಸ್ಕೂಟಿ ಮುಂಭಾಗದ ಡೂಮ್ ನಲ್ಲಿ ಕಾಣಿಸಿ ಕೊಂಡ ಸರ್ಪದೊಂದಿಗೆ  ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿ ಗ್ರಾಮದಿಂದ ಶಿವಮೊಗ್ಗದ ಸಹ್ಯಾದ್ರಿ ನಗರದ ವರೆಗೆ ಪಯಣಿಸಿದ್ದಾರೆ.

Share this Video
  • FB
  • Linkdin
  • Whatsapp

ಶಿವಮೊಗ್ಗ (ಜು. 22): ಸ್ಕೂಟಿಯೊಳಗೆ ಸೇರಿಕೊಂಡ ಸರ್ಪದ ಜೊತೆ ಶಿಕ್ಷಕಿಯೊಬ್ಬರು 10 ಕಿ.ಮೀ ಪಯಣ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸ್ಕೂಟಿ ಮುಂಭಾಗದ ಡೂಮ್ ನಲ್ಲಿ ಕಾಣಿಸಿ ಕೊಂಡ ಸರ್ಪದೊಂದಿಗೆ ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿ ಗ್ರಾಮದಿಂದ ಶಿವಮೊಗ್ಗದ ಸಹ್ಯಾದ್ರಿ ನಗರದ ವರೆಗೆ ಪಯಣಿಸಿದ್ದಾರೆ. 

ಪಿಳ್ಳಂಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ವೇದಾವತಿ ಎಂದಿನಂತೆ ಶಾಲೆಗೆ ತನ್ನ ಸ್ಕೂಟಿಯನ್ನು ಕೊಂಡೊಯ್ದಿದ್ದಾರೆ. ಮನೆಗೆ ಮರಳುವಾಗ ಸ್ಕೂಟಿ ಮುಂಭಾಗದ ಡೂಮ್ ನಲ್ಲಿ ಸರ್ಪ ಕಾಣಿಸಿಕೊಂಡಿದದೆ. 
ಧೈರ್ಯ ಮಾಡಿ ಐದಾರು ಕಿ.ಮೀ. ವರೆಗೆ ಚಲಾಯಿಸಿ ಕೊಂಡು ಬಂದಿದ್ದಾರೆ. ನಂತರ ಸ್ನೇಕ್ ಕಿರಣ್‌ಗೆ ಮಾಹಿತಿ ನೀಡಿದ್ದು, ಸ್ಕೂಟಿಯ ಬಿಡಿ ಭಾಗ ಬಿಚ್ಚಿ ಹೆಡ್‌ಲೈಟ್‌ನ ಡೂಮ್‌ನಲ್ಲಿ ಅಡಗಿದ್ದ ಸಣ್ಣ ನಾಗರಹಾವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು. 


Related Video