ಬಾವಿಯೊಳಗೆ 38 ಕೆಜಿ ಶ್ರೀಗಂಧ ಬಚ್ಚಿಟ್ಟಿದ್ದ ಭೂಪ ; ಸಿಕ್ಕಿ ಬಿದ್ದಿದ್ದು ಮಾತ್ರ ರೋಚಕ!
ಬಾವಿಯೊಳಗೆ ಬರೋಬ್ಬರಿ 3 ಲಕ್ಷ ಮೌಲ್ಯದ 38 ಕೆಜಿ ಶ್ರೀಗಂಧ ಬಚ್ಚಿಟ್ಟಿದ್ದ ಭೂಪ ಶಿವಮೊಗ್ಗ ಅರಣ್ಯ ಸಂಚಾರಿ ದಳ ಮತ್ತು ಹೊಸನಗರ ವಲಯ ಅರಣ್ಯಾಧಿಕಾರಿ ಜಂಟಿ ಕಾರ್ಯಾಚರಣೆಯಿಂದ ಸಿಕ್ಕಿ ಬಿದ್ದಿದ್ದಾನೆ. ಹೊಸನಗರ ಅರಣ್ಯ ವಲಯ ವ್ಯಾಪ್ತಿಯ ಬಾಣಿಗ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗ (ಡಿ. 03): ಬಾವಿಯೊಳಗೆ ಬರೋಬ್ಬರಿ 3 ಲಕ್ಷ ಮೌಲ್ಯದ 38 ಕೆಜಿ ಶ್ರೀಗಂಧ ಬಚ್ಚಿಟ್ಟಿದ್ದ ಭೂಪ ಶಿವಮೊಗ್ಗ ಅರಣ್ಯ ಸಂಚಾರಿ ದಳ ಮತ್ತು ಹೊಸನಗರ ವಲಯ ಅರಣ್ಯಾಧಿಕಾರಿ ಜಂಟಿ ಕಾರ್ಯಾಚರಣೆಯಿಂದ ಸಿಕ್ಕಿ ಬಿದ್ದಿದ್ದಾನೆ. ಹೊಸನಗರ ಅರಣ್ಯ ವಲಯ ವ್ಯಾಪ್ತಿಯ ಬಾಣಿಗ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೊಬೈಲ್‌ಗಳನ್ನು ರಾಶಿಹಾಕಿ ಸುಟ್ಟ ಗ್ರಾಮಸ್ಥರು! ಯಾಕಂತೀರಾ?
ಬಾಣಿಗ ಗ್ರಾಮದ ಹನೀಫ್ ಸಾಬ್ ಯಾರಿಗೂ ಗೊತ್ತಾಗದಂತೆ ಬಾವಿಯೊಳಗೆ ಪಂಪಸೆಟ್ ಇಳಿಸುವಂತೆ ಶ್ರೀಗಂಧವನ್ನು ಚೀಲದೊಳಗೆ ತುಂಬಿ ಬಾವಿಗೆ ಇಳಿಸಿಟ್ಟಿದ್ದ . ಆದರೆ ಆರೋಪಿಯ ಚಾಣಾಕ್ಷತೆಯನ್ನು ಭೇದಿಸಿದ ಅಧಿಕಾರಿಗಳು ಶ್ರೀಗಂಧವನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿ ಹನೀಫ್ ಜೊತೆಗೆ ಮಂಜುನಾಥ್, ಹೊಸಕೆಸರೆ ಗ್ರಾಮದ ಹಾಲೇಶ್ , ಮತ್ತು ಸಾಗರದ ಮಂಜುನಾಥ್ ಎಂಬುವವರ ಬಂಧಿಸಲಾಗಿದೆ.
ಹೊಸನಗರ ವಲಯ ಅರಣ್ಯಾಧಿಕಾರಿ ಕೃಷ್ಣ ಅಣ್ಣಯ್ಯಗೌಡ ಹಾಗೂ ಅರಣ್ಯ ಸಂಚಾರಿ ದಳದ ಎಸಿ ಎಫ್ ಬಾಲಚಂದ್ರ ನೇತೃತ್ವದಲ್ಲಿ ದಾಳಿ ನಡೆಸಿದ್ದರು.