ಮಾನವೀಯತೆ ಮೆರೆದ ಶಿವಮೊಗ್ಗ ಪೊಲೀಸ್ ಪೇದೆ: ವಿಡಿಯೋ ವೈರಲ್
ತುಂಬಿದ ಸರಕಿನ ಗಾಡಿಯನ್ನು ಎಳೆದೊಯ್ಯಲು ಹರಸಾಹಸ ಪಡುತ್ತಿದ್ದ ವಯೋವೃದ್ದನಿಗೆ ಪೊಲೀಸ್ ಪೇದೆ ನೆರವು ನೀಡಿದ್ದಾರೆ
ಶಿವಮೊಗ್ಗ (ಮೇ 15): ತುಂಬಿದ ಸರಕಿನ ಗಾಡಿಯನ್ನು ಎಳೆದೊಯ್ಯಲು ಹರಸಾಹಸ ಪಡುತ್ತಿದ್ದ ವಯೋವೃದ್ದನಿಗೆ ಪೊಲೀಸ್ (Police) ಪೇದೆ ನೆರವು ನೀಡಿದ್ದಾರೆ. ಹೊಟ್ಟೆಪಾಡಿಗಾಗಿ ಗಾಡಿ ಎಳೆಯಲು ಪರದಾಡುತ್ತಿರುವಾಗ ಟ್ರಾಫಿಕ್ ಸಿಬ್ಬಂದಿಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಟ್ರಾಫಿಕ್ ಪಶ್ಚಿಮ ಥಾಣೆಯ ಸಿಬ್ಬಂದಿ ರಮೇಶ್ (Ramesh) ಮಾನವೀಯ ನೆರವಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಈ ಘಟನೆ ನಡೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ವೈರಲಾಗಿದ್ದು ನೆಟ್ಟಿಗರು ಪೊಲೀಸ್ ಪೇದೆಯ ಕೆಲಸಕ್ಕೆ ಸಲಾಂ ಎಂದಿದ್ದಾರೆ
ಇದನ್ನೂ ಓದಿ: ಖಾಕಿಯೊಳಗಿನ ಮಾನವೀಯತೆ, ಇದು ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಸ್ಟೋರಿ