Asianet Suvarna News Asianet Suvarna News

ಬಾಡಿಗೆ ಕಟ್ಟೋದೆ ಕಷ್ಟ ಆಗ್ತಿದೆ : ನಗರವಾಸಿಗಳಿಗೆ ತೆರಿಗೆ ಹೊರೆ

  ಮಹಾನಗರ ಪಾಲಿಕೆ ಪ್ರಸಕ್ತ ಜಾರಿಗೊಳಿಸುತ್ತಿರುವ ಎಸ್.ಆರ್. ದರ ಆದಾರಿತ ಆಸ್ತಿ ತೆರಿಗೆ ಪದ್ದತಿ ನಾಗರಿಕರ ಆಕ್ರೋಶಕ್ಕೆ ಎಡೆ ಮಾಡಿದೆ. ಮೊದಲೇ, ಕೊರೋನಾ ಅಲೆಯಲ್ಲಿ ತಿಂಗಳುಗಟ್ಟಲೆ ವ್ಯಾಪರ ನಷ್ಟ ಅನುಭವಿಸಿದ ವ್ಯಾಪಾರಸ್ಥರು ಮಳಿಗೆ ಬಾಡಿಗೆ ಕಟ್ಟಲು ಹೈರಾಣಾಗಿದ್ದಾರೆ.

ಇದೀಗ .ಮಹಾನಗರ ಪಾಲಿಕೆ ತೆರಿಗೆಗೆ ಮನೆ ಮಾರಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ!  ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ವಯಂ ಘೋಷಿತ ಆಸ್ತಿ ತೆರಿಗೆ ದರವನ್ನು ಈ ವರ್ಷ ಹೆಚ್ಚಳ ಮಾಡಿರುವುದು ಜನತೆಯನ್ನು ಕಂಗಾಲು ಮಾಡಿದೆ. ಶ್ರೀಮಂತರು ತೆರಿಗೆ ಕಟ್ಟಬಹುದು. ಆದರೆ ಮದ್ಯಮ ವರ್ಗದ ಜನ ತೆರಿಗೆ ಭಾರವನ್ನು ಹೊರಲಾರದಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ನಿವೇಶನದ ಎಸ್.ಆರ್ ದರಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಮುಂದಾಗಿದೆ. ತೆರಿಗೆಯನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಶಿವಮೊಗ್ಗದಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ವಿವಿಧ ಬಡಾವಣೆಗಳ ಕಾಲೊನಿಗಳ ಸಂಘದ ನಿವಾಸಿಗಳು ಪ್ರತಿಭಟನೆಗೆ ಸಾಥ್ ನೀಡಿವೆ

ಶಿವಮೊಗ್ಗ (ಆ.27):    ಮಹಾನಗರ ಪಾಲಿಕೆ ಪ್ರಸಕ್ತ ಜಾರಿಗೊಳಿಸುತ್ತಿರುವ ಎಸ್.ಆರ್. ದರ ಆದಾರಿತ ಆಸ್ತಿ ತೆರಿಗೆ ಪದ್ದತಿ ನಾಗರಿಕರ ಆಕ್ರೋಶಕ್ಕೆ ಎಡೆ ಮಾಡಿದೆ. ಮೊದಲೇ, ಕೊರೋನಾ ಅಲೆಯಲ್ಲಿ ತಿಂಗಳುಗಟ್ಟಲೆ ವ್ಯಾಪರ ನಷ್ಟ ಅನುಭವಿಸಿದ ವ್ಯಾಪಾರಸ್ಥರು ಮಳಿಗೆ ಬಾಡಿಗೆ ಕಟ್ಟಲು ಹೈರಾಣಾಗಿದ್ದಾರೆ.

ಬೆಂಗಳೂರು; ಆಸ್ತಿ ತೆರಿಗೆ ವಿನಾಯಿತಿ, ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ ಗುಡ್ ನ್ಯೂಸ್

ಇದೀಗ .ಮಹಾನಗರ ಪಾಲಿಕೆ ತೆರಿಗೆಗೆ ಮನೆ ಮಾರಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ! ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ವಯಂ ಘೋಷಿತ ಆಸ್ತಿ ತೆರಿಗೆ ದರವನ್ನು ಈ ವರ್ಷ ಹೆಚ್ಚಳ ಮಾಡಿರುವುದು ಜನತೆಯನ್ನು ಕಂಗಾಲು ಮಾಡಿದೆ. ಶ್ರೀಮಂತರು ತೆರಿಗೆ ಕಟ್ಟಬಹುದು. ಆದರೆ ಮದ್ಯಮ ವರ್ಗದ ಜನ ತೆರಿಗೆ ಭಾರವನ್ನು ಹೊರಲಾರದಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ನಿವೇಶನದ ಎಸ್.ಆರ್ ದರಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಮುಂದಾಗಿದೆ. ತೆರಿಗೆಯನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಶಿವಮೊಗ್ಗದಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ವಿವಿಧ ಬಡಾವಣೆಗಳ ಕಾಲೊನಿಗಳ ಸಂಘದ ನಿವಾಸಿಗಳು ಪ್ರತಿಭಟನೆಗೆ ಸಾಥ್ ನೀಡಿವೆ

Video Top Stories