ಫುಡ್ ಡೆಲಿವರಿ ಬಾಯ್‌ಗಳಿಂದ ಲೈಂಗಿಕ ದೌರ್ಜನ್ಯ: ಆ್ಯಪ್ ಆಧಾರಿತ ಕಂಪನಿಗಳಿಗೆ ವಾರ್ನಿಂಗ್
ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ಆ್ಯಪ್ ಆಧಾರಿತ ಫುಡ್ ಕಂಪನಿಗಳಿಗೆ ಪೊಲೀಸ್ ಆಯುಕ್ತರು ವಾರ್ನಿಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್'ಗಳಿಂದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆ್ಯಪ್ ಆಧಾರಿತ ಫುಡ್ ಕಂಪನಿಗಳಿಗೆ ಪೊಲೀಸ್ ಆಯುಕ್ತರು ವಾರ್ನಿಂಗ್ ನೀಡಿದ್ದಾರೆ. ಎಲ್ಲಾ ಆ್ಯಪ್ ಮುಖ್ಯಸ್ಥರನ್ನು ಕರೆಸಿ ಸಭೆ ನಡೆಸಿದ ಪೊಲೀಸ್ ಆಯುಕ್ತರು, ಅಪರಾಧ ಹಿನ್ನೆಲೆ ಇರುವವರು ಕೆಲಸ ಮಾಡುತ್ತಿದ್ದರೆ ನಿಗಾ ವಹಿಸಬೇಕು. ಕೆಲಸಕ್ಕೆ ಸೇರುವವರ ಹಿನ್ನೆಲೆ ಪರಿಶೀಲಿಸುವುದು ಕಂಪನಿ ಜವಾಬ್ದಾರಿ. ಕೆಲಸಕ್ಕೆ ಸೇರುವವರ ವಿಳಾಸ ಪರೀಶಿಲನೆ ನಡೆಸುವುದು ಕಡ್ಡಾಯ. ಅಪರಾಧ ಹಿನ್ನೆಲೆ ಇರುವವರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು ಹೀಗೆ ಹಲವು ಸೂಚನೆಗಳನ್ನು ನೀಡಿ ಕಂಪನಿ ಮುಖ್ಯಸ್ಥರ ಬಳಿ ಮಾಹಿತಿ ಪಡೆದಿದ್ದಾರೆ.