Sense of Gratitude: ಮದುವೆ ಮನೆಯಲ್ಲಿ ಕಾಫಿದೊರೆಗೆ ಗೌರವ

  • ಮದುವೆ ಮನೆಯಲ್ಲಿ ದಿವಂಗತ ಸಿದ್ದಾರ್ಥರಿಗೆ  ನುಡಿ ನಮನ
  • ಬದುಕು ಕಟ್ಟಿಕೊಳ್ಳಲು ನೆರವಾದ ಕಾಫಿದೊರೆಗೆ ಗೌರವ
  • ನುಡಿ ನಮನ ಸಲ್ಲಿಸಲು ವೇದಿಕೆ ನಿರ್ಮಿಸಿದ್ದ ಮದುಮಗ
  • ಉದ್ಯೋಗ ನೀಡಿ ,ಬದುಕು ಕಟ್ಟಿಕೊಳ್ಳಲು ಕಾರಣರಾದ ಸಿದ್ದಾರ್ಥ

Share this Video
  • FB
  • Linkdin
  • Whatsapp

ಉದ್ಯೋಗ ನೀಡಿ ಉತ್ತಮ ಬದುಕು ಕಟ್ಟಿಕೊಳ್ಳಲು ಕಾರಣರಾದ ಸಿದ್ದಾರ್ಥ ಹೆಗ್ಗಡೆ ಅವರನ್ನು ಯುವಕನೊಬ್ಬ ತನ್ನ ಮದುವೆಯ ದಿನ ವಿಶೇಷವಾಗಿ ನೆನಪಿಸಿಕೊಂಡಿದ್ದಾನೆ. ವೇದಿಕೆಯಲ್ಲಿ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿನಮನ ಸಲ್ಲಿಸಿದ್ದಾನೆ ಚಿಕ್ಕಮಗಳೂರಿನ ಯುವಕ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ನಿಡ್ನಳ್ಳಿ ಸಮೀಪದ ಹೊಳೆಕೂಡಿಗೆಯ ಸಂತೋಷ್ ತಮ್ಮ ವಿವಾಹ ಸಮಾರಂಭದ ಮುನ್ನಾ ಕಾರ್ಯಕ್ರಮಗಳ ವೇಳೆ ಇಂತಹದೊಂದು ಕಾರ್ಯಕ್ರಮ ಮಾಡಿದ್ದಾರೆ.

ಹುಲಿ ಬಾಯಿಗೆ ನೂರಾರು ಜಾನುವಾರುಗಳು ಬಲಿ, ಗ್ರಾಮಸ್ಥರು ಕಂಗಾಲು

ಸಂತೋಷ್ ಹಾಗೂ ಬಾಳೆಹೊನ್ನೂರು ಗಡಿಗೇಶ್ವರದ ಪ್ರಮೀತಾ ಅವರ ವಿವಾಹದ ಹಿನ್ನಲೆಯಲ್ಲಿ ಮದುಮಗ ಸಂತೋಷ್ ಅವರ ಮನೆ ಹೊಳೆಕೂಡಿಗೆಯಲ್ಲಿ ನಡೆದ ಮೆಹಂದಿ ಶಾಸ್ತ್ರದಲ್ಲಿ ಸಿದ್ದಾರ್ಥ ಹೆಗ್ಗಡೆ ಅವರ ಭಾವಚಿತ್ರವನ್ನು ಇಟ್ಟು ಪುಷ್ಪನಮನ ಸಲ್ಲಿಸಿದರು. ಅಲ್ಲದೆ ನುಡಿನಮನ ವನ್ನು ಸಲ್ಲಿಸುವ ಮೂಲಕ ಸಿದ್ದಾರ್ಥ ಹೆಗ್ಗಡೆ ಅವರನ್ನು ನೆನೆಪು ಮಾಡಿಕೊಡರು.

Related Video