Chikkamagaluru: ಹುಲಿ ಬಾಯಿಗೆ ನೂರಾರು ಜಾನುವಾರುಗಳು ಬಲಿ, ಗ್ರಾಮಸ್ಥರು ಕಂಗಾಲು
ಮೂಡಿಗೆರೆ (Mudigere) ತಾಲೂಕಿನ ಬೊಕ್ಕಳಿ, ಪಾನಹಳ್ಳಿ, ಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಜನ ಹುಲಿ (Tiger) ದಾಳಿಯ ಭಯದಿಂದ ಕಂಗಾಲಾಗಿದ್ದಾರೆ. ನೂರಾರು ಹಸುಗಳು ವ್ಯಾಘ್ರಕ್ಕೆ ಬಲಿಯಾಗಿದೆ.
ಚಿಕ್ಕಮಗಳೂರು (ಜ. 23): ಮೂಡಿಗೆರೆ (Mudigere) ತಾಲೂಕಿನ ಬೊಕ್ಕಳಿ, ಪಾನಹಳ್ಳಿ, ಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಜನ ಹುಲಿ (Tiger) ದಾಳಿಯ ಭಯದಿಂದ ಕಂಗಾಲಾಗಿದ್ದಾರೆ. ನೂರಾರು ಹಸುಗಳು ವ್ಯಾಘ್ರಕ್ಕೆ ಬಲಿಯಾಗಿದೆ. ಹಸುಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರವೂ ಇಲ್ಲ, ಇತ್ತ ಜಾನುವಾರುಗಳು ಇಲ್ಲ ಎಂಬಂತಾಗಿದೆ. ಅರಣ್ಯಾಧಿಕಾರಿಗಳನ್ನು ಕೇಳಿದರೆ ಸಬೂಬು ಹೇಳುತ್ತಾರೆಯೇ ವಿನಃ ಯಾವುದೇ ಕ್ರಮ ಕೈಗೊಂಡಿಲ್ಲ.
Wildlife: ನೀರು ಕುಡಿಯುತ್ತಿದ್ದ ಕಾಡೆಮ್ಮೆ ಬೆನ್ನಟ್ಟಿ ಹುಲಿ ಬೇಟೆ, ಮೈ ಜುಂ ಎನಿಸುವ ಅಪರೂಪದ ದೃಶ್ಯ
ಇನ್ನು ಕಾಫಿ ಕಟಾವಿಗೆ, ರೈತಾಪಿ ಕೆಲಸಗಳಿಗೆ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಮಾಲಿಕರು ಕೂಡಾ ಎಸ್ಟೇಟ್ ಕಡೆ ಹೋಗಲು ಭಯಪಡುತ್ತಿದ್ದಾರೆ. ಈ ಹುಲಿಯನ್ನು ಹಿಡಿದು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.