ರಾಜೀನಾಮೆ ಕೊಟ್ಟು ಹೋಗುತ್ತಿದ್ದ ಮೈಸೂರು ಪಾಲಿಕೆ ಆಯುಕ್ತೆ ಕಾಲಿಗೆ ಬಿದ್ದ ಸೆಕ್ಯೂರಿಟಿ ಗಾರ್ಡ್

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಡೆಗೆ ಬೇಸತ್ತು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ಸಲ್ಲಿಸಿದ್ದಾರೆ.  ಆದ್ರೆ, ರಾಜೀನಾಮೆ ಕೊಟ್ಟು ಹೋಗುವಾಗ ಸೆಕ್ಯೂರಿಟಿ ಗಾರ್ಡ್, ಶಿಲ್ಪಾ ನಾಗ್ ಕಾಲಿಗೆ ಬಿದ್ದು ಹೋಗಬೇಡಿ ಮೇಡಂ ಅಂತ ಅಂಗಲಾಚಿ ಬೇಡಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಮೈಸೂರು, (ಜೂನ್. 03): ಮೈಸೂರಿನಲ್ಲಿ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿ ಮಧ್ಯೆ ಬೀದಿ ರಂಪಾಟ ನಡೆಯುತ್ತಿರುವ ಮಧ್ಯೆ ಇದೀಗ ಐಎಎಸ್ ವರ್ಸಸ್ ಐಎಎಸ್ ವಾರ್​ ಶುರುವಾಗಿದೆ.

Add Asianetnews Kannada as a Preferred SourcegooglePreferred

ಮೈಸೂರು ಪಾಲಿಕೆ ಆಯುಕ್ತೆ ರಾಜೀನಾಮೆ, ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ

ಹೌದು..ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಡೆಗೆ ಬೇಸತ್ತು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ಸಲ್ಲಿಸಿದ್ದಾರೆ. ಆದ್ರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಲಿಕೆ ಕಚೇರಿಯಿಂದ ಹೊರ ಹೋಗುತ್ತಿದ್ದ ವೇಳೆ ಪಾಲಿಕೆ ಭದ್ರತಾ ಸಿಬ್ಬಂದಿಯೊಬ್ಬರು ಶಿಲ್ಪನಾಗ್ ಕಾಲಿಗೆ ಬಿದ್ದು, ಹೋಗಬೇಡಿ ಎಂದು ಮನವಿ ಮಾಡಿದ ಪ್ರಸ‌ಂಗ ನಡೆದಿದೆ. ಶಿಲ್ಪಾ ನಾಗ್ ಪಾಲಿಕೆ ಗೇಟ್ ಮುಂಭಾಗ ಕಾರು ಹತ್ತಲು‌ ಬಂದಾಗ ಹೋಗಬೇಡಿ ಮೇಡಂ ಅಂತ ಸೆಕ್ಯೂರಿಟಿ ಗಾರ್ಡ್ ಕಾಲಿಗೆ ಎರಗಿದ್ದಾರೆ. ಬಳಿಕ ಶಿಲ್ಪಾನಾಗ್ ಕೈಮುಗಿದು ಕಾರು ಏರಿ ಹೊರಟರು.

Related Video