Covid 19 Spike: ರಾಜ್ಯದ 6 ಜಿಲ್ಲೆಗಳಲ್ಲಿ ಸೋಂಕು ಏರಿಕೆ: 1 ರಿಂದ 9ನೇ ತರಗತಿ ಬಂದ್!

*ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಕ್ಯೆ ಏರಿಕೆ
*‌ರಾಜ್ಯದ ಹಲವು ಶಾಲೆಗಳಲ್ಲಿ ಕೋವಿಡ್‌ 19 ಸ್ಫೋಟ
*ಆರು ಜಿಲ್ಲೆಗಳಲ್ಲಿ1 ರಿಂದ 9ನೇ ತರಗತಿ ಬಂದ್

First Published Jan 17, 2022, 12:46 PM IST | Last Updated Jan 17, 2022, 1:20 PM IST

ಬೆಂಗಳೂರು (ಜ. 17): .ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು (Covid 19 Cases) ವೇಗದಲ್ಲಿ ಹರಡುತ್ತಿದ್ದು ಶುಕ್ರವಾರ 34,047 ಹೊಸ ಪ್ರಕರಣಗಳು ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಲಕ್ಷದ ಸಮೀಪಕ್ಕೆ ಬಂದಿದೆ. ಈ ಮಧ್ಯೆ ಶಾಲೆಗಳಲ್ಲೂ (School) ಸೋಂಕು ಹೆಚ್ಚಾಗಿದ್ದು ಮಕ್ಕಳಲ್ಲಿ, ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ರಾಜ್ಯದ 6 ಜಿಲ್ಲೆಗಳಲ್ಲಿ ಶಾಲೆ ಬಂದ್ ಮಾಡಿ ಇಲಾಖೆ ಆದೇಶ ಹೊರಡಿಸಿದೆ.

ಇದನ್ನೂ ಓದಿ : Covid 19 Spike: 1% ಸೋಂಕಿತರಷ್ಟೇ ಆಸ್ಪತ್ರೆಗೆ ದಾಖಲು: ಸಾವಿನ ಸಂಖ್ಯೆ ಕಡಿಮೆ

ಸೋಂಕು ಹೆಚ್ಚಾಗಿರುವ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು, ಮಂಡ್ಯ, ಮೈಸೂರು, ಬಳ್ಳಾರಿ, ಬೆಳಗಾವಿ, ಧಾರವಾಡಗಳಲ್ಲಿ ಶಾಲೆ ಬಂದ್ ಆಗಿದೆ. ಈ ಜಿಲ್ಲೆಗಳಲ್ಲಿ 1 ರಿಂದ 9ನೇ ತರಗತಿ ಬಂದ್‌ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಯ ಶಾಲೆಗಳಲ್ಲಿ ಸೋಂಕು ಕಾಣಿಸಿಕೊಳ್ಳತ್ತಿರುವುದು ಈಗ ಆತಂಕ್ಕೆ ಎಡೆ ಮಾಡಿದೆ. ಕೊರೋನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವದರಿಂದ ರಾಜ್ಯದಲ್ಲಿ ಇನ್ನಷ್ಟು ಟಫ್‌ ರೂಲ್ಸ್‌ ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ನೈಟ್‌ ಕರ್ಫ್ಯೂ ಹಾಗೂ ವೀಕೆಂಡ್‌ ಕರ್ಫ್ಯೂ (Curfew) ರಾಜ್ಯದಲ್ಲಿ ಜಾರಿಯಲ್ಲಿದೆ.