ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್: ಕ್ಲೀನ್ ಚಿಟ್ ಸಿಕ್ರೂ ಈಶ್ವರಪ್ಪಗೆ ಬಿಡದ ಸಂಕಷ್ಟ

ಸಚಿವ ಸಂಪುಟ ಸೇರಲು ತಯಾರಿಯಲ್ಲಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.

Share this Video
  • FB
  • Linkdin
  • Whatsapp

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ, ಕ್ಲೀನ್ ಚಿಟ್​ ಪಡೆದುಕೊಂಡಿದ್ದ ಕೆ.ಎಸ್ ಈಶ್ವರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದ ಕುರಿತು ಸಾಕ್ಷ್ಯ ಹಾಜರುಪಡಿಸಲು ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ. ಕೇಸ್‌ ಸಂಬಂಧ ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್‌ನಲ್ಲಿ ಉಲ್ಲೇಖಿಸಿದ ಸಾಕ್ಷ್ಯ ನೀಡುವಂತೆ ಕೋರ್ಟ್‌ ಆದೇಶ ಮಾಡಿದೆ. ಅಸಲಿ ಸಾಕ್ಷ್ಯಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪ ಮಾಡಿ, ಖಾಕಿ ಸಲ್ಲಿಸಿದ್ದ ಬಿ ರಿಪೋರ್ಟ್‌ ಪ್ರಶ್ನಿಸಿ ಸಂತೋಷ್‌ ಸಹೋದರ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ ಮುಂದೆ ಸಾಕ್ಷಿ ಹಾಜರಿಗೆ ಸಹೋದರ ಪ್ರಶಾಂತ್‌ ಪಾಟೀಲ್‌ ಮನವಿ ಮಾಡಿದ್ದರು. ಪ್ರಶಾಂತ್‌ ಪಾಟೀಲ್‌ ಪರ ವಕೀಲ ಕೆಬಿಕೆ ಸ್ವಾಮಿ ವಾದ ಮಂಡಿಸಿದ್ದರು. ತನಿಖಾಧಿಕಾರಿಯೇ ಖುದ್ದು ಕೋರ್ಟ್‌ಗೆ ಹಾಜರು ಪಡಿಸಲು ಆದೇಶ ನೀಡಲಾಗಿದ್ದು, ಜನವರಿ 31ರಂದು ತನಿಖಾಧಿಕಾರಿ ಕೋರ್ಟ್‌ ಮುಂದೆ ಹಾಜರಿಗೆ ಸೂಚನೆ ನೀಡಲಾಗಿದೆ.

Related Video