Asianet Suvarna News Asianet Suvarna News

India@75: 9ಕಿಮೀ ಉದ್ದದ ತಿರಂಗಾ ಧ್ವಜ ಯಾತ್ರೆ, ಸಂತೋಷ್‌ ಲಾಡ್‌ ಚಾಲನೆ

ಕಲಘಟಗಿ ಪಟ್ಟಣದಲ್ಲಿ 9 ಕಿಮೀ ಉದ್ದದ, 9 ಅಡಿ ಅಗಲದ ತ್ರಿವರ್ಣ ಧ್ವಜದ ಜಾಥಾ,  ಸಂತೋಷ್ ಲಾಡ್‌ ರಿಂದ ಚಾಲನೆ

Aug 15, 2022, 3:58 PM IST

ಹುಬ್ಬಳ್ಳಿ (ಆ.15): ಸಂತೋಷ್ ಲಾಡ್‌ ಫೌಂಡೇಶನ್‌ ವತಿಯಿಂದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದಲ್ಲಿ ಕಲಘಟಗಿ ಪಟ್ಟಣದಲ್ಲಿ 9 ಕಿಮೀ ಉದ್ದದ, 9 ಅಡಿ ಅಗಲದ ತ್ರಿವರ್ಣ ಧ್ವಜದ ಜಾಥಾ ನಡೆಯುತ್ತಿದೆ.  ಸಂತೋಷ್ ಲಾಡ್‌ ಇದಕ್ಕೆ ಚಾಲನೆ ನೀಡಿದ್ದು, 12 ಸಾವಿರ ಮಹಿಳೆಯರು ಕುಂಭಮೇಳ ನಡೆಸಿದ್ದು, 1 ಲಕ್ಷ ಜನರಿಗೆ ಊಟ ಹಾಗೂ 2500 ವಾಹನ ವ್ಯವಸ್ಥೆ ಮಾಡಲಾಗಿದೆ.  ಜಾಥಾ ಮುಗಿದ ಬಳಿಕ  6 ವೇದಿಕೆಗಳಲ್ಲಿ ನೃತ್ಯ ಮತ್ತು ದೇಶ ಭಕ್ತಿಗೀತೆಗಳು ನಡೆಯಲಿದ್ದು ಸ್ಥಳೀಯ 1000 ಜನರಿಗೆ ಸನ್ಮಾನ ಸೇರಿದಂತೆ ಭಾರತ ಮಾತೆಗೆ ಗೌರವ ನಮನಗಳು ಸಲ್ಲಿಸುವ ಕಾರ್ಯಕ್ರಮಗಳು ನಡೆಯಲಿವೆ.