ಬೆಳಗಾವಿ: ರಾಯಣ್ಣ ಮೂರ್ತಿ ತೆರವುಗೊಳಿಸುವಂತೆ MES ಪಟ್ಟು
ವಿವಾದ ಇತ್ಯರ್ಥವಾಗುವವರೆಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸುವಂತೆ ಪಟ್ಟು ಹಿಡಿದ ಎಂಇಎಸ್| ಎಂಇಎಸ್‌ಗೆ ಸಾಥ್ ಕೊಟ್ಟ ಶಿವಸೇನೆ| ಯಾವುದೇ ಇತ್ಯರ್ಥಕ್ಕೆ ಬರದೆ ಸಭೆ ಮೊಟಕು|
ಬೆಳಗಾವಿ(ಆ.28): ವಿವಾದ ಇತ್ಯರ್ಥವಾಗುವವರೆಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸುವಂತೆ ಪಟ್ಟು ಹಿಡಿಯುವ ಮೂಲಕ ಎಂಇಎಸ್ ಉದ್ಧಟತನ ಮೆರೆದ ಘಟನೆ ಇಂದು(ಶುಕ್ರವಾರ) ಜಿಲ್ಲಾಧಿಕಾರಿ ಸಭೆಯಲ್ಲಿ ನಡೆದಿದೆ. ಎಂಇಎಸ್‌ಗೆ ಶಿವಸೇನೆ ಮುಖಂಡರೂ ಕೂಡ ಸಾಥ್ ಕೊಟ್ಟಿದ್ದಾರೆ.
ರಾಯಣ್ಣ ಪ್ರತಿಮೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸೂಚನೆ: ಬೊಮ್ಮಾಯಿ
ಶಿವಸೇನೆ ಮುಖಂಡರು ಸಭೆಯಿಂದ ಅರ್ಧಕ್ಕೆ ಹೊರ ನಡೆದಿದ್ದಾರೆ. ಯಾವುದೇ ಇತ್ಯರ್ಥಕ್ಕೆ ಬರದೆ ಸಭೆ ಮೊಟಕುಗೊಳಿಸಲಾಗಿದೆ. ಹೀಗಾಗಿ ಈ ವಿವಾದ ಸದ್ಯಕ್ಕೆ ಬಗೆಹರಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.