Asianet Suvarna News Asianet Suvarna News

BIG 3: ಹರಿಹರದಲ್ಲಿ ಮಣ್ಣು ಮಾಫಿಯಾ: ಕಾನೂನು ಕ್ರಮ ಯಾವಾಗ?

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿ ಮಣ್ಣು ಮಾಫಿಯಾ ಜೋರಾಗಿದ್ದು, ಧೂಳಿನಿಂದ ಕೆಲ ಗ್ರಾಮಸ್ಥರು ಹೈರಾಣಾಗಿ ಹೋಗಿದ್ದಾರೆ.
 

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಸಾರಥಿ, ದೀಟೂರು, ಪಾಮೇನಹಳ್ಳಿಯ ಜನರು ಮಣ್ಣು ಮಾಫಿಯಾದಿಂದ ಬೇಸತ್ತು ಹೋಗಿದ್ದಾರೆ. ಈ ಮಾರ್ಗದಲ್ಲಿ ಬೆಳಿಗ್ಗೆ 5 ರಿಂದ ಸಂಜೆ 7 ಗಂಟೆ ವರೆಗು ಒಂದರ ಹಿಂದೆ ಮತ್ತೊಂದು ವಾಹನಗಳು ಸಾಲುಗಟ್ಟಿ ಮಣ್ಣು ತುಂಬಿಕೊಂಡು ಹರಿಹರದ ಸುತ್ತಮುತ್ತಲಿನ ಇಟ್ಟಿಗೆ ಭಟ್ಟಿಗಳಿಗೆ ಸಂಚರಿಸುತ್ತಿವೆ. ಗಂಟೆಗೊಂದು ಎರಡು ಗಂಟೆಗೊಂದು ಲಾರಿ ಮಣ್ಣು ತುಂಬಿಕೊಂಡು ಹೋದ್ರೆ ಸಮಸ್ಯೆ ಇಲ್ಲ. ಆದ್ರೆ ಪ್ರತಿ ಐದು ನಿಮಿಷಕ್ಕೊಂದು ಮಣ್ಣು ತುಂಬಿದ ಟ್ರಕ್ ಸಂಚರಿಸುತ್ತದೆ. ಇದರಿಂದ ರಸ್ತೆಯಲ್ಲಿ ಬೈಕ್ ಆಟೋ ಬಸ್ ಸವಾರರು ಪಾದಚಾರಿಗಳಿಗೆ ದೊಡ್ಡ ಸಂಕಟ ಎದುರಾಗಿದೆ. ಒಂದು  ರೀತಿ ಉಸಿರುಗಟ್ಟಿಸುವ ವಾತವರಣ ನಿರ್ಮಾಣವಾಗಿದೆ. ಚಿಕ್ಕಬಿದರೆ, ಸಾರಥಿ, ಪಾಮೇನಹಳ್ಳಿ ದೀಟೂರು ಮಾರ್ಗವಾಗಿ ಹರಿಹರದ ಮುಖ್ಯ ರಸ್ತೆಗೆ ಹೋಗುವವರೆಗೂ ಉಸಿರು ಬಿಗಿಹಿಡಿದು ರಸ್ತೆಯಲ್ಲೇ ಸಂಚರಿಸುವ ಸ್ಥಿತಿ ಇದೆ.