ಧಾರವಾಡ; ರಕ್ತದಾನ-ಮಹಾದಾನ...ರಾಟ್‌ವಿಲ್ಲರ್‌ಗೆ ರಕ್ತ ಕೊಟ್ಟ ಜರ್ಮನ್ ಶೆಫರ್ಡ್ !

* ಇದು ಶ್ವಾನಪ್ರಿಯರು ನೋಡಲೇಬೇಕಾದ ಸ್ಟೋರಿ
*ರಕ್ತಸ್ರಾವದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ವಾನ
* ಜರ್ಮನ್ ಶೆಫರ್ಡ್ ಶ್ವಾನದಿಂದ ರಕ್ತ ಪಡೆದುಕೊಳ್ಳಲಾಯಿತು
* ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ರಾಟ್ ವಿಲ್ಲರ್ ಶ್ವಾನ

First Published Oct 11, 2021, 6:43 PM IST | Last Updated Oct 11, 2021, 6:43 PM IST

ಧಾರವಾಡ(ಅ.  11)  ರಕ್ತದಾನ(Blood donation) ಮಹಾದಾನ ಎನ್ನುವ ಮಾತು ಇದೆ.   ರಕ್ತದಾನ ಮಾಡುವ ಮೂಲಕ ಅನೇಕರ ಪ್ರಾಣ ಉಳಿಸುವ ದಾನಿಗಳಿಗೆ ಧನ್ಯವಾದ ಹೇಳಲೇಬೇಕು. ಅದೇ ರೀತಿಯ ಒಂದು ಕತೆ ಇಲ್ಲಿದೆ. ಇದು ಶ್ವಾನಗಳ (Dog) ಕತೆ. 

ಮರೆಯಾದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ; ವಿಡಿಯೋ

ಇದು ಶ್ವಾನಪ್ರಿಯರ ಕತೆ.. ಶ್ವಾನದ ಕತೆ.. ಒಂದೊಳ್ಳೆ ಸ್ಟೋರಿ.  ವಿಡಿಯೋದಲ್ಲಿ ನೋಡುತ್ತಿರುವ ಹಾಗೆ ರಾಟ್ ವಿಲ್ಲರ್(Rottweiler) ಶ್ವಾನದ ಹೆಸರು ಡೀಸೆಲ್.. ಪಾಟೀಲರ ಅಚ್ಚು ಮೆಚ್ಚಿನ ಶ್ವಾನ.. ಆದರೆ ಡೀಸೆಲ್ ಗೆ ಅನಾರೋಗ್ಯ ಕಾಡಿದೆ. ಅತೀವ ರಕ್ತ ಸ್ರಾವದಿಂದ ರಕ್ತದ ಕೊರತೆ ಕಾಣಿಸಿಕೊಂಡಿದೆ. ಧಾರವಾಡದ ಕೃಷಿ ವಿವಿಯ ಶಶಿಧರ್ ಪಾಟೀಲ್ ಒಂದು ಉಪಾಯ ಹೇಳಿದ್ದು ಶ್ವಾನ ಪ್ರಿಯ ಸೋಮಶೇಖರ್ ಅವರ ಜರ್ಮನ್ ಶೆಫರ್ಡ್(German Shepherd) ಶ್ವಾನದ ರಕ್ತ ಪಡೆದುಕೊಂಡು ಡಿಸೇಲ್ ಪ್ರಾಣ ಉಳಿಸಲಾಗಿದೆ.