ಯಾದಗಿರಿಯಲ್ಲಿ ಭೀಕರ ರಸ್ತೆ ಅಪಘಾತ: 13 ಜನರಿಗೆ ಗಾಯ, 5 ಮಂದಿ ಸಾವು

ಯಾದಗಿರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಸಾವಿಗೀಡಾಗಿದ್ದರು. 13 ಜನ ಗಾಯಗೊಂಡಿದ್ದಾರೆ.

First Published Jun 6, 2023, 11:14 AM IST | Last Updated Jun 6, 2023, 11:14 AM IST

ಯಾದಗಿರಿ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಐದು ಜನ ಸಾವಿಗೀಡಾಗಿದ್ದು, 13 ಜನ ಗಾಯಗೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 (ಎ)ನಲ್ಲಿ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್‌ ಡಿಕ್ಕಿ ಹೊಡೆದ್ದು, ಎಲ್ಲಾರು ಆಂಧ್ರಪ್ರದೇಶ ಮೂಲದವರು ಎನ್ನಲಾಗ್ತಿದೆ. ಮೃತರನ್ನು ರಮಿಜಾ ಬೇಗಂ (50), ಮುನೀರ್ (40), ನಯಾಮತ್ (40), ಮುದಸ್ಸೀರ್ (12) ಮತ್ತು ಸುಮ್ಮಿ (12) ಎಂದು ಗುರುತಿಸಲಾಗಿದೆ.  ಇವರೆಲ್ಲಾ ಊರುಸ್‌ಗೆ ಬರುತ್ತಿದ್ದರು ಎನ್ನಲಾಗ್ತಿದೆ. ಇಬ್ಬರು ಮಕ್ಕಳು ಸೇರಿ ಐವರು ದುರ್ಮರಣ ಹೊಂದಿದ್ದಾರೆ.

ಇದನ್ನೂ ವೀಕ್ಷಿಸಿ: Wildlife Conservation Campaign: ಕಾಡಿನೊಳಗೆ ಹೆಜ್ಜೆ ಹಾಕಿದ ನಟ ರಿಷಭ್‌ ಶೆಟ್ಟಿ: ಅರಣ್ಯವಾಸಿಗಳ ಪಾಲಿಗೆ ಇದು ಆಶಾಕಿರಣ !