Uttara Kannada: ಸಂತಾನಾಭಿವೃದ್ಧಿಗಾಗಿ ಬಂದಿದ್ದ ರಿಡ್ಲೆ ಆಮೆ ಸಾವು?
* ಸಂತನಾಭಿವೃದ್ಧಿಗಾಗಿ ಮೊಟ್ಟೆ ಇಡಲು ಬಂದಿದ್ದ ಆಮೆ
* ರಸ್ತೆ ಕಾಮಗಾರಿ ವೇಳೆ ಆಮೆ ಸತ್ತಿರಬಹುದು ಎಂಬ ಶಂಕೆ
* ಮರಣೋತ್ತರ ಪರೀಕ್ಷೆಗಾಗಿ ಆಮೆಯ ದೇಹ ರವಾನೆ
ಉತ್ತರ ಕನ್ನಡ(ಫೆ.02): ಸಂತನಾಭಿವೃದ್ಧಿಗಾಗಿ ಮೊಟ್ಟೆ ಇಡಲು ಬಂದಿದ್ದ ರಿಡ್ಲೆ ಜಾತಿಯ ಆಮೆಯೊಂದು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಟೊಂಕಾ ಕಡಲತೀರದಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ಮೊಟ್ಟೆ ಇಡಲು ಬಂದಿದ್ದ ಆಮೆಯ ಕಳೆಬರ ಪತ್ತೆಯಾಗಿದೆ. ಬಂದರು ನಿರ್ಮಾಣಕ್ಕೆ ನಡೆಯುತ್ತಿದ್ದ ರಸ್ತೆ ಕಾಮಗಾರಿ ವೇಳೆ ಆಮೆ ಸತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆಮೆಯ ದೇಹವನ್ನ ಹೊನ್ನಾವರ ಅರಣ್ಯ ಇಲಾಖೆಯ ಅಧಿಕಾರಿಗಳು ಕಳುಹಿಸಿದ್ದಾರೆ.
Towing: ಬೆಂಗಳೂರಿನಲ್ಲಿ ಹೈದ್ರಾಬಾದ್ ಟೋಯಿಂಗ್ ನೀತಿ ಜಾರಿ? ಇಂದು ಮಹತ್ವದ ಸಭೆ