Asianet Suvarna News Asianet Suvarna News

ಸಿಲಿಕಾನ್ ಸಿಟಿಯಲ್ಲಿ ಡೇಂಜರಸ್ ಬೈಕ್ ರೈಡಿಂಗ್: ವಾಹನ ಸವಾರರ ಎದೆಯಲ್ಲಿ ನಡುಕ

ಬೆಂಗಳೂರಿನಲ್ಲಿ ಬೈಕ್ ಸವಾರನೊಬ್ಬ ಡೇಂಜರಸ್ ರೈಡಿಂಗ್ ನಡೆಸಿದ್ದು, ಆತನ ದುಸ್ಸಾಹಸಕ್ಕೆ ಹಲವು ವಾಹನ ಸವಾರರ ಎದೆಯಲ್ಲಿ ನಡುಕ ಉಂಟಾಗಿದೆ.
 

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಫ್ಲೈ ಓವರ್ ಮೇಲೆ ಒನ್ ವೇಯಲ್ಲಿ ವೇಗವಾಗಿ ಬೈಕ್ ಚಲಾಯಿಸಿ ಸವಾರ ದುಸ್ಸಾಹಸ ಮೆರೆದಿದ್ದಾನೆ. ಬೈಕ್ ಸವಾರನ ಬೇಜವಾಬ್ದಾರಿ ಚಾಲನೆ ಕಂಡು ವಾಹನ ಸವಾರರು ಕಂಗಾಲಾಗಿದ್ದಾರೆ. ಸಿನಿಮಾ ಶೈಲಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬೈಕ್ ಚಲಾಯಿಸಿದ್ದು, ಬೈಕ್ ಸವಾರನ ಡೆಡ್ಲಿ ರೈಡಿಂಗ್ ಮೊಬೈಲ್'ನಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರಿಂದ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಫ್ಲೋಡ್ ಮಾಡಿ ಕ್ರಮಕ್ಕೆ ಒತ್ತಾಯಿಸಲಾಗಿದೆ. ಟ್ರಾಫಿಕ್ ಸ್ಪೆಷಲ್ ಕಮೀಷನರ್, ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಿ ದೂರು ನೀಡಲಾಗಿದೆ.