Davanagere: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿಕ ಬದಲಾವಣೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

*  2014 ರ ನಂತರ ಡಿಪಾಸಿಟಿ ಕ್ಷೇತ್ರದಲ್ಲಿ ಬದಲಾವಣೆ ತಂದ ಪ್ರಧಾನಿ ಮೋದಿ
*  ಎಲ್ಲಾ ಕ್ಷೇತ್ರದ ಬ್ಯಾಂಕ್‌ಗಳಲ್ಲೂ ಫೈನಾನ್ಸಿಯಲ್ ಸ್ಟೆಬಿಲಿಟಿ ಬಂದಿದೆ 
*  ಠೇವಣಿದಾರರ ಹಿತಾಸಕ್ತಿ ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ

First Published Dec 12, 2021, 3:10 PM IST | Last Updated Dec 12, 2021, 3:10 PM IST

ದಾವಣಗೆರೆ(ಡಿ.12): 2014 ರ ನಂತರ ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಕ್ರಾಂತಿಕಾರಿಕ ಬದಲಾವಣೆ ಆಗಿದೆ. ಪ್ರಧಾನಿ ನರೇಂದ್ರ(Narendra Modi) ಮೋದಿ ಅವರು 2014 ರ ನಂತರ ಡಿಪಾಸಿಟಿ ಕ್ಷೇತ್ರದಲ್ಲಿ ಬದಲಾವಣೆ ತಂದಿದ್ದಾರೆ. ಆರ್‌ಬಿಐ ಬ್ಯಾಂಕ್ ಸೇರಿದಂತೆ ಎಲ್ಲಾ ಕ್ಷೇತ್ರದ ಬ್ಯಾಂಕ್‌ಗಳಲ್ಲೂ ಫೈನಾನ್ಸಿಯಲ್ ಸ್ಟೆಬಿಲಿಟಿ ಬಂದಿದೆ ಅಂತ ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ಹೇಳಿದ್ದಾರೆ. 

Religious Conversion: ಮತಾಂತರ ನಿಷೇಧ ಕಾಯ್ದೆ ಮಂಡನೆ ಸುಳಿವು ಬಿಟ್ಟುಕೊಟ್ಟ ಸಿಎಂ ಬೊಮ್ಮಾಯಿ

ಇಂದು(ಭಾನುವಾರ) ದಾವಣಗೆರೆ ನಗರದಲ್ಲಿ 7 ರಾಜ್ಯಗಳ 16  ಅರ್ಬನ್ ಕೋ ಅಪರೇಟಿವ್ ಬ್ಯಾಂಕ್‌  ಫಲಾನುಭವಿಗಳ ಜೊತೆ ಪ್ರಧಾನಿ ವರ್ಚುವಲ್‌ ಸಂವಾದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ರಾಜೀವ್‌ ಚಂದ್ರಶೇಖರ್‌, ಠೇವಣಿದಾರರು ಬ್ಯಾಂಕಿಂಗ್ ವ್ಯವಸ್ಥೆಯ ಪ್ರಮುಖ ಪಾಲುದಾರರಾಗಿದ್ದಾರೆ.  ಅವರ ಹಿತರಕ್ಷಣೆ ಕೇಂದ್ರ ಸರ್ಕಾರ ಮಹತ್ತರ ಸುಧಾರಣೆ ಮಾಡಿದೆ. ವಿಮೆ‌ ಪರಿಹಾರವನ್ನು 1 ಲಕ್ಷದಿಂದ‌ 5 ಲಕ್ಷಕ್ಕೆ ಹೆಚ್ಚಿಸಿದೆ. ಶೇ. 80 ರಷ್ಟು ಠೇವಣಿದಾರರ ಹಿತಾಸಕ್ತಿ ರಕ್ಷಣೆಗೆ ಕೇಂದ್ರ ಸರ್ಕಾರ(Central Government) ಮುಂದಾಗಿದೆ ಅಂತ ತಿಳಿಸಿದ್ದಾರೆ.