Religious Conversion: ಮತಾಂತರ ನಿಷೇಧ ಕಾಯ್ದೆ ಮಂಡನೆ ಸುಳಿವು ಬಿಟ್ಟುಕೊಟ್ಟ ಸಿಎಂ ಬೊಮ್ಮಾಯಿ

*  ಆಸೆ ಆಮೀಷ ಒಡ್ಡಿ ಮತಾಂತರ ಆಗೋದಕ್ಕೆ ಅವಕಾಶವಿಲ್ಲ
*  ಕಮೀಟಿ ಸಲ್ಲಿಸಿದ ವರದಿಯನ್ನ ಅಸೆಂಬ್ಲಿಯಲ್ಲಿ ಚರ್ಚೆ ಮಾಡುತ್ತೇವೆ
*  ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ
 

First Published Dec 12, 2021, 2:01 PM IST | Last Updated Dec 12, 2021, 2:01 PM IST

ಹುಬ್ಬಳ್ಳಿ(ಡಿ.12): ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ಕೊಟ್ಟಿದ್ದಾರೆ. ಹೌದು, ಇಂದು(ಭಾನುವಾರ) ನಗರದಲ್ಲಿ ಮಾತನಾಡಿದ ಅವರು, ಕಾನೂನು ರಚನೆ ಆಗಲಿ ಬಹಳ ಜನರ ಅಪೇಕ್ಷೆಯಾಗಿದೆ. ಎಲ್ಲ ಧರ್ಮಗಳೂ ಸಂವಿಧಾನಾತ್ಮಕವಾಗಿ ರಚನೆಯಾಗಿವೆ. ಅವರಿಗೆ ಯಾವುದೇ ಆತಂಕ ಬೇಡ. ಯಾರಿಗೂ ತೊಂದರೆಯಾಗಲ್ಲ. ಬಡತನವನ್ನ ದುರುಪಯೊಗ ಮಾಡಿಕೊಂಡು ಮತಾಂತರ ಮಾಡೋದು ತಪ್ಪು. ಆಸೆ ಆಮೀಷ ಒಡ್ಡಿ ಮತಾಂತರ ಆಗೋದಕ್ಕೆ ಅವಕಾಶವಿಲ್ಲ. ಮತಾಂತರ ಕಾಯ್ದೆ ಚರ್ಚೆಗೂ ಮೊದಲು ಒಂದು ಕಮೀಟಿಯನ್ನ ಮಾಡಿದ್ದೇವೆ. ಕಾನೂನು ಇಲಾಖೆಯ ಕಮೀಟಿ ಪರಿಶೀಲನೆ ಮಾಡುತ್ತಿದೆ. ಕಮೀಟಿ ಸಲ್ಲಿಸಿದ ವರದಿಯನ್ನ ಅಸೆಂಬ್ಲಿಯಲ್ಲಿ ಚರ್ಚೆ ಮಾಡುತ್ತೇವೆ. ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಕಾನೂನು ತರುತ್ತೇವೆ ಅಂತ ಹೇಳಿದ್ದಾರೆ. 

Sex For Job: ಧಾರವಾಡದ ಅತ್ಯಾಚಾರ ಕೇಸ್‌ನಲ್ಲಿ IFS ಅಧಿಕಾರಿ ವಿರುದ್ಧ ಮತ್ತೊಂದು ಆರೋಪ