ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಜನರ ರಕ್ಷಣೆ ಹೇಗೆ? ಎನ್‌ಡಿಆರ್‌ಎಫ್ ಅಣಕು ಕಾರ್ಯಾಚರಣೆ

ಉತ್ತರ ಕನ್ನಡ ಜಿಲ್ಲಾ ಪೊಲೀಸರ ಉಪಸ್ಥಿತಿಯಲ್ಲಿ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ಗುಂಟೂರು ವಿಭಾಗದಿಂದ ಇಂದು ಕದ್ರಾ ಡ್ಯಾಂ ಬಳಿಯಿರುವ ನೆರೆಪೀಡಿತ ಪ್ರದೇಶದಲ್ಲಿ ಅಣುಕು ಕಾರ್ಯಾಚರಣೆ ನಡೆಸಲಾಯಿತು. 

Share this Video
  • FB
  • Linkdin
  • Whatsapp

ಉತ್ತರ ಕನ್ನಡ (ಅ. 01):  ಜಿಲ್ಲಾ ಪೊಲೀಸರ ಉಪಸ್ಥಿತಿಯಲ್ಲಿ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ಗುಂಟೂರು ವಿಭಾಗದಿಂದ ಇಂದು ಕದ್ರಾ ಡ್ಯಾಂ ಬಳಿಯಿರುವ ನೆರೆಪೀಡಿತ ಪ್ರದೇಶದಲ್ಲಿ ಅಣುಕು ಕಾರ್ಯಾಚರಣೆ ನಡೆಲಾಯಿತು. ಸಿಐಎಸ್‌ಎಫ್, ಜಿಲ್ಲಾ ಆಡಳಿತ ಅಧಿಕಾರಿಗಳು, ಪೊಲೀಸ್ ಅಧಿಕಾರಿ, ಅಗ್ನಿಶಾಮಕದಳ, ಗೃಹರಕ್ಷಕದಳ ಸಿಬ್ಬಂದಿ ಉಪಸ್ಥಿತಿಯಲ್ಲಿ ಎನ್‌ಡಿಆರ್‌ಎಫ್ ಇನ್ಸ್‌ಪೆಕ್ಟರ್ ಸಂಜೀವ್ ಕುಮಾರ್ ನೇತೃತ್ವದ 24 ಮಂದಿಯ ತಂಡದ ಸಹಯೋಗದಲ್ಲಿ ಈ ಅಣುಕು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. 

ಪ್ರವಾಹದ ಸಂದರ್ಭ ನೀರಿನಲ್ಲಿ ಮುಳುಗಿದ ಜನರನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡೋದು, ಬೆಟ್ಟ ಭಾಗದಿಂದ ಜನರನ್ನು ಯಾವ ರೀತಿಯಲ್ಲಿ ಹಗ್ಗದ ಮೂಲಕ ಇಳಿಸೋದು, ದ್ವೀಪದ ನಡುವೆ ಸಿಲುಕಿಕೊಂಡವರನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡೋದು ಹಾಗೂ ಟ್ಯೂಬ್ ಬೋಟ್‌ ಚಲಾವಣೆಯೊಂದಿಗೆ ಸಾಹಸ ಮುಂತಾದವುಗಳನ್ನು ಪ್ರದರ್ಶಿಸಿತು. ಕದ್ರಾ ನೆರೆಪೀಡಿತ ಪ್ರದೇಶದಲ್ಲಿ ಎನ್‌ಡಿಆರ್‌ಎಫ್ ತಂಡದ ಸಾಹಸ ಭರಿತ ಅಣುಕು ಪ್ರದರ್ಶನ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದೆ. ರಕ್ಷಣಾ ಕಾರ್ಯಾಚರಣೆ ಸಂಬಂಧಿಸಿ ಸ್ಥಳೀಯರಿಗೂ ತರಬೇತಿ ನೀಡಲು ಎನ್‌ಡಿಆರ್‌ಎಫ್ ತಂಡ ಸಿದ್ಧವಾಗಿದ್ದು, ಇದರ ಉಪಯೋಗವನ್ನು ಪಡೆದುಕೊಳ್ಳಬೇಕಿದೆ ಅನ್ನೋದು ಜಿಲ್ಲೆಯ ಜನರ ಅಭಿಪ್ರಾಯ.

Related Video