Karnataka Rain : ಒಣಗಿಸಿದ್ದ ಮೆಣಸಿನಕಾಯಿಯಲ್ಲಿ ಮೊಳಕೆ, ರೈತ ಕಂಗಾಲು

ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆ ಭಾರೀ ಅವಾಂತರವನ್ನು ಮಾಡಿದೆ. ಬಹುತೇಕ ಕಡೆ ಕಟಾವಿಗೆ ಬಂದಿದ್ದ ಬೆಳೆ ಹಾನಿಯಾಗಿದೆ. 

First Published Nov 23, 2021, 1:50 PM IST | Last Updated Nov 23, 2021, 1:50 PM IST

ಬಳ್ಳಾರಿ (ನ. 23): ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆ (Untimely Rain) ಭಾರೀ ಅವಾಂತರವನ್ನು ಮಾಡಿದೆ. ಬಹುತೇಕ ಕಡೆ ಕಟಾವಿಗೆ ಬಂದಿದ್ದ ಬೆಳೆ  (Crop) ಹಾನಿಯಾಗಿದೆ. ಇಲ್ಲಿನ ಕುರುಗೋಡು ತಾಲೂಕಿನ ಸೋಮಲಾಪುರ ತಾಲೂಕಿನಲ್ಲಿ ಒಣಗಿಸಲು ಹಾಕಿದ್ದ ಮೆಣಸಿಕಕಾಯಿಯಲ್ಲಿ ಮೊಳಕೆ ಬಂದಿದೆ.

Karnataka Rain: ರಣಭೀಕರ ಮಳೆಗೆ ರಾಜ್ಯದಲ್ಲಿ 24 ಸಾವು, 9153 ಮನೆ ಹಾನಿ, ರೈತರ ಗೋಳು ಕೇಳೊರ್ಯಾರು?

ದೊಡ್ಡ ಪ್ರಮಾಣದಲ್ಲಿ ಮೆಣಸಿನ ಕಾಯಿ ಇರುವುದರಿಂದ ಮುಂದೇನು ಮಾಡುವುದು ಎಂದು ರೈತ ಕಂಗಾಲಾಗಿದ್ದಾನೆ. ಲಕ್ಷಾಂತರ ರೂ ಹಾಕಿ ಮೆಣಸಿನ ಕಾಯಿ ಬೆಳೆದಿದ್ದೇವೆ, ಏನ್ಮಾಡೋದು ಸ್ವಾಮಿ ಎಂದು ಅಳಲು ತೋಡಿಕೊಂಡಿದ್ಧಾರೆ.