ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ದಾಖಲೆ ಸೃಷ್ಟಿಸಿದ ಭತ್ತ ಕಟಾವು!

Share this Video
  • FB
  • Linkdin
  • Whatsapp

ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಭತ್ತ ಕಟಾವು ದಾಖಲೆ ಸೃಷ್ಟಿಸಿದೆ. ಏಕಕಾಲದಲ್ಲಿ ಒಂದು ಸಾವಿರ ಜನರಿಂದ ಭತ್ತ ಕಟಾವು ಮಾಡಿ ಸಂಭ್ರಮಿಸಿದ್ದಾರೆ. ಬೆಳ್ತಂಗಡಿಯ ಬೆಳಾಲು ಗ್ರಾಮದ ಅನಂತೋಡಿ ಸಾಂಪ್ರಾದಾಯಿಕ ಕೃಷಿ ವೈಭವಕ್ಕೆ ಸಾಕ್ಷಿಯಾಯ್ತು. ಆ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರೋದಕ್ಕೆ 'ಯುವ ಸಿರಿ' ಕಾರ್ಯಕ್ರಮ ಸಜ್ಜಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿದ ಅನಂತೋಡಿ ದೇವರ ಗದ್ದೆಯಲ್ಲಿ, ಬದುಕು ಕಟ್ಟೋಣ ಬನ್ನಿ ತಂಡದಿಂದ ಗತ ಕಾಲದ ಕೃಷಿ ವೈಭವವನ್ನ ನೆನಪಿಸುವ ಭತ್ತ ಕಟಾವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಾದ್ಯ ಘೋಷ, ಚೆಂಡೆ, ಸಾಂಪ್ರಾದಾಯಿಕ ಉಡುಗೆ ತೊಡುಗೆಗಳೊಂದಿಗೆ ನಡೆದ ಭತ್ತ ಕಟಾವು ಮಾಡಲಾಯ್ತು. ಯುವ ಜನತೆಯನ್ನ ಕೃಷಿ ಚಟುವಟಿಕೆಯತ್ತ ಸೆಳೆಯಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ, ಎಸ್ ಡಿಎಂ ವಿದ್ಯಾ ಸಂಸ್ಥೆ ಸೇರಿದಂತೆ ಸಾವಿರಕ್ಕೂ ಅಧಿಕ ಜನರು ಕೃಷಿ ಕೆಲಸ ಮಾಡಿದರು.ಕಟಾವು ಮಾಡಿದ ತೆನೆಯನ್ನ ಪಲ್ಲಕ್ಕಿಯಲ್ಲಿರಿಸಿ ಭವ್ಯ ಮೆರವಣಿಗೆ ಮಾಡಲಾಯ್ತು. ಅನಂತೋಡಿ ದೇವಸ್ಥಾನದ ಮುಂಭಾಗ ಭತ್ತ ತೆನೆ ಬೆರ್ಪಡಿಸುವ ಕಾರ್ಯ ನಡೆಯಿತು. ಯುವಸಿರಿ ಮೂಲಕ ಬಂದ ಅಕ್ಕಿಯನ್ನ ವಿವಿಧ ದೇವಸ್ಥಾನಗಳ ಅನ್ನದಾನ ಹಾಗು ನೈವೇದ್ಯಕ್ಕೆ ಉಚಿತವಾಗಿ ಸಮರ್ಪಣೆ ಮಾಡಲಾಯ್ತುSuvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political UpdatesSuvarna News Live: https://www.youtube.com/live/R50P2knCQBs?feature=shared

Related Video