BIG 3 ಬಡ ವಿದ್ಯಾರ್ಥಿಗಳ ಜೀವನ ಬದಲಾಯಿಸಿದ ಗುರು: ಈ ಕನ್ನಡ ಸೇವಕನ ಬಗ್ಗೆ ನಿಮಗೆಷ್ಟು ಗೊತ್ತು?
ದಾವಣಗೆರೆ ಜಿಲ್ಲೆಯ ರವಿಕುಮಾರ್ ಕೆ. ನವಲಗುಂದ ಎಂಬ ಉಪನ್ಯಾಸಕರು, ತಮಗೆ ಬರುವ ಸಂಬಳದಲ್ಲಿ ಬಡ ಮಕ್ಕಳ ಶುಲ್ಕ, ಪುಸ್ತಕ, ಬಟ್ಟೆ ಕೊಟ್ಟು ಸಾಕಷ್ಟು ವಿದ್ಯಾರ್ಥಿಗಳ ಪಾಲಿಗೆ ಆಸರೆ ಆಗಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಕನ್ನಡ ಉಪನ್ಯಾಸಕ ಡಾ. ರವಿಕುಮಾರ್ ಕೆ. ನವಲಗುಂದ ಅವರು ವಿದ್ಯಾರ್ಥಿಗಳ ಪಾಲಿಗೆ ಮಾದರಿ ಶಿಕ್ಷಕ. ಸರ್ಕಾರಿ ಪದವಿ ಪೂರ್ವ ಕಾಲೇಜ್'ನಲ್ಲಿ 2007 ರಿಂದ ಇಲ್ಲಿಯವರೆಗೂ ಕರ್ತವ್ಯ ನಿರ್ವಹಿಸುತ್ತಿರುವ ರವಿಕುಮಾರ್ ಅವರು ಕನ್ನಡ ಸೇವಕರೂ ಹೌದು. ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಅವರ ಬದುಕಿನ ಬದಲಾವಣೆಗೂ ಸದಾ ಜೊತೆಗೆ ನಿಲ್ಲುತ್ತಾರೆ. ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯ ಬದಲಾಯಿಸಿದ್ದಾರೆ. ಇವರು ವೃತ್ತಿಯಲ್ಲಿ ಕನ್ನಡ ಉಪನ್ಯಾಸಕ. ಆದ್ರೆ ವಿಶೇಷತೆಯಲ್ಲಿ ಮಾದರಿ ಸಂಶೋಧಕ. ಮಧ್ಯ ಕರ್ನಾಟಕದಲ್ಲಿ ಅಲೆಮಾರಿ ಕನ್ನಡ ಮೇಷ್ಟ್ರು ಅಂತಲೇ ಖ್ಯಾತಿ ಪಡೆದಿರುವ ಇವರು ಗ್ರಾಮೀಣ ಭಾಗದ ಬಡ, ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿದ್ದಾರೆ. ನೂರಾರು ಬಡ ವಿದ್ಯಾರ್ಥಿಗಳ ಜೀವನ ಬದಲಾಯಿಸಿದ್ದಾರೆ.