Asianet Suvarna News Asianet Suvarna News

ಬಳ್ಳಾರಿ: ಉಜ್ಜೈನಿ ಶ್ರೀ ಬದಲಾವಣೆ ವಿಚಾರದಲ್ಲಿ ಜಗದ್ಗುರುಗಳ ಜಟಾಪಟಿ

ಆರೋಪ ಪ್ರತ್ಯಾರೋಪಗಳು ಮಾಡುತ್ತಿರುವ ಸ್ವಾಮೀಜಿಗಳು| ಉಜ್ಜೈನಿ ಪೀಠದ ಶ್ರೀ ಬದಲಾವಣೆ ವಿಚಾರ| ಪಂಚಪೀಠದಲ್ಲಿನ ಗೊಂದಲ ಹಿನ್ನಲೆ ಉಜ್ಜೈನಿ ಪೀಠಕ್ಕೆ ಪೊಲೀಸ್ ಭದ್ರತೆ| 

ಬಳ್ಳಾರಿ(ನ.16): ಉಜ್ಜೈನಿ ಪೀಠದ ಶ್ರೀಗಳನ್ನು ಬದಲಾವಣೆ ಮಾಡಬೇಕೆನ್ನುವ ರಂಭಾಪುರಿ ಶ್ರೀಗಳ ಹೇಳಿಕೆ ಕಾಶಿ ಜಗದ್ಗುರುಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೌದು, ಈ ಸಂಬಂಧ ಸ್ವಾಮೀಜಿಗಳು ಆರೋಪ ಪ್ರತ್ಯಾರೋಪಗಳು ಮಾಡುತ್ತಿದ್ದಾರೆ. 

ಲೈವ್ ರಿಪೋರ್ಟಿಂಗ್ ವೇಳೆ ಕೊಚ್ಚಿ ಹೋಯ್ತು ಸೇತುವೆ : ಪತ್ರಕರ್ತೆ ಸ್ವಲ್ಪದರಲ್ಲೇ ಬಚಾವ್..!

ಗದಗದ ಮುಕ್ತಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಭಾಪುರಿ ಶ್ರೀಗಳು ಬದಲಾವಣೆ ಹೇಳಿಕೆಯನ್ನ ನೀಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಕಾಶಿ ಜಗದ್ಗುರುಗಳು ಇದೀಗ ರಂಭಾಪುರಿ ಶ್ರೀಗಳ ವಿರುದ್ಧ ನೇರ ಅಸಮಾಧಾನ ಹೊರ ಹಾಕಿದ್ದಾರೆ. ರಂಭಾಪುರಿ ಶ್ರೀಗಳು ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ. ಒಕ್ಕೂಟದ ವ್ಯವಸ್ಥೆ ದಕ್ಕೆಯಾಗ್ತಿದೆ ಎಂದು ಹೇಳಿದ್ದಾತರೆ.  ಪಂಚಪೀಠದಲ್ಲಿನ ಗೊಂದಲ ಹಿನ್ನಲೆ ಸದ್ಯ ಉಜ್ಜೈನಿ ಪೀಠಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.