ಯಾದಗಿರಿ: ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಮಗುಚಿದ ಲಾರಿ: ಚಾಲಕನ ರಕ್ಷಣೆ

Yadagiri News: ಹಳ್ಳದ ಸೇತುವೆ ದಾಟುವಾಗ ಲಾರಿ ಮಗುಚಿದ ಘಟನೆ ವಡಗೇರ ತಾಲೂಕಿನ ಮದರಕಲ್ ಬಳಿ ನಡೆದಿದೆ

Share this Video
  • FB
  • Linkdin
  • Whatsapp

ಯಾದಗಿರಿ (ಆ. 27): ಹಳ್ಳದ ಸೇತುವೆ ದಾಟುವಾಗ ಲಾರಿ ಮುಗುಚಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಮದರಕಲ್ ಬಳಿ ನಡೆದಿದೆ. ಉಕ್ಕಿ ಹರಿಯುತ್ತಿದ್ದ ಹಳ್ಳ ದಾಟಲು ಹೋದಾಗ ಘಟನೆ ನಡೆದಿದೆ. ಹಳ್ಳ ದಾಟಲು ದುಸ್ಸಾಹಸಕ್ಕೆ ಕೈ ಹಾಕಿದ್ದ ಲಾರಿ ಚಾಲಕ ಬಚಾವ್ ಆಗಿದ್ದಾರೆ. ಲಾರಿ ಚಾಲಕ ಶಂಕರ್ ಹಳ್ಳದಲ್ಲೇ ಸಿಲುಕಿ 3 ಗಂಟೆ ಕಳೆದಿದ್ದರು. ಬೆಳಿಗ್ಗೆ 6 ಗಂಟೆಗೆ ಹಳ್ಳದಲ್ಲಿ ಸಿಲುಕಿದ್ದ ಲಾರಿ ಚಾಲಕನನ್ನು ಅಗ್ನಿಶಾಮಕದಳ ಸಿಬ್ಬಂದಿಯಿಂದ ರಕ್ಷಿಸಿದ್ದಾರೆ. ಹಗ್ಗದ ಸಹಾಯದಿಂದ ಚಾಲಕನನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದ್ದಾರೆ. ಚಿತ್ತಾಪುರದಿಂದ ಬೆಳಗಾವಿಗೆ ಹೋಗುತ್ತಿದ್ದ ಲಾರಿ ಹಳ್ಳದಲ್ಲಿ ಸಿಲುಕಿತ್ತು. ಹಳ್ಳದಲ್ಲಿ ಸಿಲುಕಿ ಲಾರಿ ಚಾಲಕ ಸಹಾಯಕ್ಕೆ ಅಂಗಲಾಚಿದ್ದರು.

ಬೆಂಗಳೂರು- ಮೈಸೂರು ರಸ್ತೆಯಲ್ಲಿ 5 ಕಿ.ಮೀ ಟ್ರಾಫಿಕ್ ಜಾಂ!

Related Video