Asianet Suvarna News Asianet Suvarna News

ಬೆಳಗಾವಿ: ಮಳೆ ಏಟಿಗೆ ಭೂಕುಸಿತ, ಕರ್ನಾಟಕ-ಗೋವಾ ರೈಲು ಸಂಚಾರಕ್ಕೆ ಅಡಚಣೆ

Aug 4, 2019, 8:58 PM IST

ಬೆಳಗಾವಿ, [ಆ.04]: ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಲೋಂಡಾ ಬಳಿ ರೈಲ್ವೆ ಹಳಿ ಪಕ್ಕದಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದ ಕರ್ನಾಟಕ ಹಾಗೂ ಗೋವಾ ಮಧ್ಯೆ ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿದೆ. 

ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಭೂ ಕುಸಿದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ರೈಲ್ವೆ ಅಧಿಕಾರಿಗಳು ದುರಸ್ತಿಗೆ ಮುಂದಾಗಿದ್ದಾರೆ. ಈ ಕಾಮಗಾರಿ ರವಿವಾರ ರಾತ್ರಿ ವೇಳೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಭೂ ಕುಸಿತದಿಂದಾಗಿ ಮೀರಜ್‌ ಹಾಗೂ ಗೋವಾದ ಕ್ಯಾಸಲ್‌ ರಾಕ್‌ ಬಳಿ ಸಂಚರಿಸುವ ರೈಲನ್ನು ಬೆಳಗಾವಿವರೆಗೆ ಮಾತ್ರ ಓಡಿಸಲಾಗುವದು. ಇದೇ ರೈಲು ಆ. 5 ರಂದು ಬೆಳಗಾವಿಯಿಂದ ಮೀರಜ್‌ ಗೆ ಸಂಚರಿಸಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.