Asianet Suvarna News Asianet Suvarna News

ಬಗೆಹರಿಯದ ರಾಯಚೂರು ಕಲುಷಿತ ನೀರು ಸಮಸ್ಯೆ, ಮಹಿಳೆ ಸಾವು, 40 ಜನರು ಅಸ್ವಸ್ಥ

ರಾಯಚೂರು (Raichur) ಕಲುಷಿತ ನೀರು ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಕಲುಷಿತ ನೀರಿನಿಂದ ಸಾವು, ಅನಾರೋಗ್ಯ ಹೆಚ್ಚಾದರೂ ಸಂಬಂಧಪಟ್ಟವರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕಲುಷಿತ ನೀರು ಕುಡಿದು ಮಾನ್ವಿ ತಾ.ಜೂಕೂರು ಗ್ರಾಮದ ಲಕ್ಷ್ಮಿ (26) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. 

ರಾಯಚೂರು (ಜು. 04): ಇಲ್ಲಿನ ಕಲುಷಿತ ನೀರು ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಕಲುಷಿತ ನೀರಿನಿಂದ ಸಾವು, ಅನಾರೋಗ್ಯ ಹೆಚ್ಚಾದರೂ ಸಂಬಂಧಪಟ್ಟವರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕಲುಷಿತ ನೀರು ಕುಡಿದು ಮಾನ್ವಿ ತಾ.ಜೂಕೂರು ಗ್ರಾಮದ ಲಕ್ಷ್ಮಿ (26) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ವಾಂತಿ ಭೇದಿಯಿಂದ 50 ಕ್ಕೂ ಹೆಚ್ಚು ಜನರು ನಿರ್ಜಲೀಕರಣದಿಂದ  ಆಸ್ಪತ್ರೆಗಳಿಗೆ ದಾಖಲಾಗಿ‌ದ್ದಾರೆ. 

ಈಗ ಎಚ್ಚತ್ತುಕೊಂಡ ಗ್ರಾ.ಪಂ.ತಾ.ಪಂ ಮತ್ತು ಆರೋಗ್ಯ ಇಲಾಖೆ ವೆಲ್ಕಂದಿನ್ನಿ ಗ್ರಾಮದ ಸಮುದಾಯ ಭವನದಲ್ಲಿ ಗ್ರಾಮಸ್ಥರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ.  ವೈದ್ಯರು ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ನಿಯೋಜಿಸಲಾಗಿದೆ.  ಜೂಕೂರು ‌ಮತ್ತು ವೆಲ್ಕಂದಿನ್ನಿ ಗ್ರಾಮಕ್ಕೆ ‌ರಾಯಚೂರು ಡಿಎಚ್ ಒ ಡಾ.ಸುರೇಂದ್ರ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಹೆಚ್ವಿನ ಚಿಕಿತ್ಸೆಗಾಗಿ ರವಾನಿಸಲು ಗ್ರಾಮದಲ್ಲಿ ಆ್ಯಂಬುಲೆನ್ಸ್ ಸಿದ್ದವಾಗಿ ನಿಂತಿದೆ. 

Video Top Stories