ರಾಯಚೂರು: ಹಳ್ಳ ಹಿಡಿದ ಜಲಜೀವನ ಮಿಷನ್ ಕಾಮಗಾರಿ
- ರಾಯಚೂರು: ಜಲಜೀವನ ಮಿಷನ್‌ನಲ್ಲಿ ಕಳಪೆ ಕಾಮಗಾರಿ ಆರೋಪ
- ಶುದ್ಧ ಕುಡಿಯುವ ನೀರು ಪೂರೈಸುವ ಜಲಜೀವನ ಮಿಷನ್
ಪ- ರಿಶೀಲನೆಗಾಗಿ ಕಾಮಗಾರಿ ಸ್ಥಳಕ್ಕೆ ತಲೆಹಾಕದ ಅಧಿಕಾರಿಗಳು
ರಾಯಚೂರು (ಸೆ. 09): 2023 ರ ವೇಳೆಗೆ ರಾಜ್ಯದ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ ನಲ್ಲಿಯಲ್ಲಿ ನೀರು ಪೂರೈಕೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಜಲ ಜೀವನ್ ಮಿಷನ್ ಆರಂಭಿಸಿದೆ. ಯೋಜನೆಯಂತೆ ಸರ್ಕಾರ ಕೋಟಿ ಕೋಟಿ ವೆಚ್ಚದಲ್ಲಿ ಯೋಜನೆ ಕಾಮಗಾರಿ ಆರಂಭಿಸಲು ಆದೇಶ ಮಾಡಿದೆ.
ರಾಯಚೂರು: ಬೇವಿನ ಮರಕ್ಕೂ ವೈರಸ್ ಅಟ್ಯಾಕ್, ಹಳದಿ ಬಣ್ಣಕ್ಕೆ ತಿರುಗಿವೆ ಮರಗಳು..!
ರಾಯಚೂರು ಜಿಲ್ಲೆಯಲ್ಲಿಯೂ ಸಹ 311 ಕಡೆಗಳಲ್ಲಿ ಜಲ ಜೀವನ ಮಿಷನ್‌ನ ಕಾಮಗಾರಿ ಭರದಿಂದ ಸಾಗಿದೆ. ಆದ್ರೆ ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿಂಗಾಪೂರ ಗ್ರಾಮದಲ್ಲಿ ಸರಿಯಾಗಿ ಕಾಮಗಾರಿ ನಡೆಯುತ್ತಿಲ್ಲ. ಗ್ರಾಮದಲ್ಲಿ ಕಳೆದ 6 ತಿಂಗಳ ಹಿಂದೆಯಷ್ಟೇ ನಿರ್ಮಾಣ ಮಾಡಿದ ಸಿಸಿ ರಸ್ತೆ ಒಡೆದು ಹಾಕಿ ಪೈಪ್‌ಗಳನ್ನ ಹಾಕಲಾಗುತ್ತಿದೆ. ಕಾಮಗಾರಿ ನಡೆದ ಸ್ಥಳದಲ್ಲಿ ಗುತ್ತಿಗೆದಾರನಾಗಲಿ, ಅಧಿಕಾರಿಗಳಾಗಲಿ ಯಾರು ಪರಿಶೀಲನೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.