Asianet Suvarna News Asianet Suvarna News

ರಾಯಚೂರು: ವಿವಾದಗಳ ಸುಳಿಯಲ್ಲಿ ಡಿವಿಆರ್‌ ಕ್ಲಬ್; ಆರಂಭಕ್ಕೆ ಪರ-ವಿರೋಧ ಹೋರಾಟ!

ಅನೈತಿಕ ತಾಣವಾದ ಕ್ಲಬ್ ಬಂದ್ ಮಾಡುವಂತೆ ಹೋರಾಟ, ಮತ್ತೊಂದು ಕಡೆ ಕ್ಲಬ್ ಬಂದ್ ಮಾಡದಂತೆ ಒತ್ತಾಯ. ಈ ಎರಡು ಗುಂಪುಗಳ ಹೋರಾಟದ ನಡುವೆ ಡಿವಿಆರ್ ಕ್ಲಬ್ ಪರಿಶೀಲನೆ ನಡೆಸಿದ ಅಧಿಕಾರಿಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ರಾಯಚೂರು ನಗರದ ಹೊರವಲಯದ ಯರಮರಸ್ ಬಳಿ ಇರುವ ಡಿವಿಆರ್ ರಿಕ್ರಿಯೇಷನ್ ಕ್ಲಬ್ ಬಳಿ.

First Published Jul 2, 2022, 3:01 PM IST | Last Updated Jul 2, 2022, 3:07 PM IST

ಅನೈತಿಕ ತಾಣವಾದ ಕ್ಲಬ್ ಬಂದ್ ಮಾಡುವಂತೆ ಹೋರಾಟ, ಮತ್ತೊಂದು ಕಡೆ ಕ್ಲಬ್ ಬಂದ್ ಮಾಡದಂತೆ ಒತ್ತಾಯ. ಈ ಎರಡು ಗುಂಪುಗಳ ಹೋರಾಟದ ನಡುವೆ ಡಿವಿಆರ್ ಕ್ಲಬ್ ಪರಿಶೀಲನೆ ನಡೆಸಿದ ಅಧಿಕಾರಿಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ರಾಯಚೂರು ನಗರದ ಹೊರವಲಯದ ಯರಮರಸ್ ಬಳಿ ಇರುವ ಡಿವಿಆರ್ ರಿಕ್ರಿಯೇಷನ್ ಕ್ಲಬ್ ಬಳಿ.

ಡಿವಿಆರ್ ರಿಕ್ರಿಯೇಷನ್ ಕ್ಲಬ್ ಮುಂದೆ ದೊಡ್ಡ ಹೈಡ್ರಾಮಾವೇ ನಡೆಯಿತು. ಒಂದು ತಂಡ ಡಿವಿಆರ್ ಕ್ಲಬ್ ಬಂದ್ ಮಾಡಬೇಕು. ಅದ್ರೆ ಮತ್ತೊಂದು ತಂಡ ಕ್ಲಬ್ ಬಂದ್ ಮಾಡಬಾರದು ಅಂತ ಪ್ರತಿಭಟನೆ ನಡೆಸಿದ್ರು. ಇದು ಹೊರಗಡೆ ನಡೆಯುತ್ತಿದ್ರೆ, ಅತ್ತ  ಹೈಕೋರ್ಟ್  ನಿವೃತ್ತ ನ್ಯಾಯಮೂರ್ತಿ ಸತ್ಯನಾರಾಯಣಚಾರ್ಯ ಕಾಡ್ಲೂರು ನೇತೃತ್ವದ ತನಿಖಾ ತಂಡ ಡಿವಿಆರ್ ಕ್ಲಬ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇತ್ತ ನಿವೃತ್ತ ನ್ಯಾಯಮೂರ್ತಿ ಕ್ಲಬ್ನಲ್ಲಿ ಅಧಿಕಾರಿಗಳ ಜೊತೆಗೆ ಪರಿಶೀಲನೆ ನಡೆಸಿದ್ರೆ, ಇತ್ತ ಕ್ಲಬ್ ಹೊರಗಡೆ ರಾಯಚೂರಿನ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ಯಾವುದೇ ಕಾರಣಕ್ಕೂ ಡಿವಿಆರ್ ಕ್ಲಬ್ ಓಪನ್ಗೆ ಅವಕಾಶ ನೀಡಬಾರದು. ಡಿವಿಆರ್ ಕ್ಲಬ್ ಒಂದು ಅನೈತಿಕ ತಾಣವಾಗಿದೆ.

ರಾಯಚೂರು: ಲಿಂಗಸೂಗೂರು, ದೇವದುರ್ಗ ತಾಲೂಕಿನಲ್ಲಿ ಕಾಡುತ್ತಿದೆ ಅತೀ ಹೆಚ್ಚು ಅಪೌಷ್ಟಿಕತೆ

ಈ ಕ್ಲಬ್ನಲ್ಲಿ ಇಸ್ಟೀಟು ಆಟವಾಡಲು ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಂದ ಜನರು ಬರುತ್ತಾರೆ. ಈ ಕ್ಲಬ್ನಿಂದಾಗಿ ಸ್ಥಳೀಯ ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕ್ಲಬ್ ಸುತ್ತಮುತ್ತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಓಡಾಟ ಮಾಡುತ್ತಾರೆ. ಮುಖ್ಯರಸ್ಯೆಯಲ್ಲಿಯೇ ಕ್ಲಬ್ ಇರುವುದರಿಂದ ನೂರಾರು ಕಡೆಗಳಿಂದ ಜನರು ಆಗಮಿಸಿ ನಾನಾ ಅಕ್ರಮ ಚಟುವಟಿಕೆಗಳನ್ನು ಮಾಡುತ್ತಾರೆ. ಹೀಗಾಗಿ ಸರ್ಕಾರ  ಡಿವಿಆರ್ ಕ್ಲಬ್ ನಡೆಸಲು ನೀಡಿರುವ ಲೈಸನ್ಸ್ ಸಹ ರದ್ದುಪಡಿಸಿ ಕ್ಲಬ್ ಸಂಪೂರ್ಣವಾಗಿ ಬಂದ್ ಮಾಡಿಸುವಂತೆ ಆಗ್ರಹಿಸಿದ್ರು.

ಇನ್ನೂ ಡಿವಿಆರ್ ರಿಕ್ರಿಯೇಷನ್ ಕ್ಲಬ್ನಲ್ಲಿ ಟೇನಿಸ್, ಜೀಮ್ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಬೇಕು. ಆದ್ರೆ ಡಿವಿಆರ್ ಕ್ಲಬ್ನಲ್ಲಿ ನಿತ್ಯವೂ ಇಸ್ಟೀಟ್ ಆಟ ನಡೆಯುತ್ತೆ, ಇಸ್ಟೀಟು ಆಡಲು ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರದಿಂದಲ್ಲೂ ಗ್ರಾಹಕರು ಬಂದು ಲಕ್ಷಾಂತರ ಇಸ್ಟೀಟು ಆಟವಾಡುತ್ತಿದ್ದಾರೆ. ಕೆಲ ಸ್ಥಳೀಯರು ಆಟದಲ್ಲಿ ಭಾಗವಹಿಸಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಹಾಳಾಗಿ ಹೋಗುತ್ತಿದ್ದಾರೆ. ಈ ಬಗ್ಗೆ ಕ್ಲಬ್ ಎಂಡಿಯನ್ನ ಕೇಳಿದ್ರೆ ನಮಗೆ ಕ್ಲಬ್ ತೆರೆಯಲು ಕೋರ್ಟ್ ಆದೇಶ ನೀಡಿದೆ. ಆದ್ರೂ ಕೆಲ ಇಲಾಖೆಯವರು ನಮಗೆ ಕಿರಿಕಿರಿ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯುತ್ತಿಲ್ಲ. ನಮ್ಮ ಕ್ಲಬ್ನಲ್ಲಿ 33 ಎಲೆಯ ಇಸ್ಟೀಟು ಆಟ ನಡೆಯುತ್ತೆ ಅಂತ ಹೇಳಿದ್ರು.

Raichur: ಬಾರೋ...ಬಾರೋ ಮಳೆರಾಯ....ನಿತ್ಯ ಮಳೆಗಾಗಿ ಜಪಿಸುತ್ತಿರುವ ಅನ್ನದಾತರು!

 ಒಟ್ಟಿನಲ್ಲಿ ಯರಮರಸ್ ಬಳಿ ಇರುವ ಡಿವಿಆರ್ ರಿಕ್ರಿಯೇಷನ್ ಕ್ಲಬ್ ಆರಂಭಿಸಲು ಹತ್ತಾರು ವಿಘ್ನಗಳು ಎದುರಾಗಿವೆ. ಹೈಕೋರ್ಟ್ನ ನ್ಯಾಯಮೂರ್ತಿಗಳು ಹಾಗೂ ಅಧಿಕಾರಿಗಳ ತಂಡ ಡಿವಿಆರ್ ಕ್ಲಬ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದೆ. ಕ್ಲಬ್ ಆರಂಭಿಸಲು ಸರ್ಕಾರ ಅನುಮತಿ ನೀಡುತ್ತಾ ಅಥವಾ ಕ್ಲಬ್ ಸಂಪೂರ್ಣವಾಗಿ ಬಂದ್ ಮಾಡಿಸುತ್ತಾ ಕಾದುನೋಡಬೇಕಾಗಿದೆ.