ಸೊಳ್ಳೆ ಕಾಟಕ್ಕೆ ಗುಡ್ ಬೈ! ಜನರೇ ಕಂಡು ಹುಡುಕಿದ ಐಡಿಯಾಕ್ಕೆ ಜೈ!

ಅಯ್ಯೋ ನಮ್ಮ ನಗರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಏನೂ ಮಾಡಿದ್ರೂ, ಸೊಳ್ಳೆಗಳು ರಾತ್ರಿ  ಬಂದು ಕಚ್ಚುತ್ತಿವೆ. ಮನೆ ಬಾಗಿಲು, ಕಿಟಕಿ ತೆರೆಯಲು ಸೊಳ್ಳೆ ಬರುತ್ತವೆ ಎಂಬ ಭಯವಾಗುತ್ತಿದೆ. ಈ ಭಯದಿಂದ ಮುಕ್ತಿ ಹೊಂದಲು ನೀವೂ ಹೀಗೆ ಮಾಡಿದ್ರೆ ಸಾಕು. ಸೊಳ್ಳೆಗಳು ಅಲ್ಲ ಸೊಳ್ಳೆಯ ಸಂತತಿಯೇ ನಾಶ ಮಾಡಬಹುದು. ಹೇಗೆ ಅಂತೀರಾ ಈ ವರದಿ ನೋಡಿ.
 

First Published Sep 18, 2019, 7:28 PM IST | Last Updated Sep 18, 2019, 7:28 PM IST

ರಾಯಚೂರು (ಸೆ.18): ಕಟ್ಟಿಗೆ ಪುಡಿಯಿಂದ ಬಾಲ್‌ಗಳನ್ನು ಮಾಡುತ್ತಿರುವ ಸಾರ್ವಜನಿಕರು, ಮತ್ತೊಂದು ಕಡೆ ಮಾಡಿದ ಬಾಲ್‌ಗಳನ್ನು ಸುಟ್ಟು ಎಣ್ಣೆಯಲ್ಲಿ ಹಾಕುತ್ತಿರುವ ಜನ. ಇನ್ನೊಂದು ಕಡೆ ಚರಂಡಿ ಬಳಿ ಹೋಗಿ ಬಾಲ್‌ಗಳನ್ನು ಹಾಕುತ್ತಿರುವ ಮಹಿಳೆ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ರಾಯಚೂರು ನಗರದ ವಾರ್ಡ್ ನಂ.5 ರಲ್ಲಿ.

ರಾಯಚೂರು ನಗರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾರ್ವಜನಿಕರು ನಗರಸಭೆಗೆ ದೂರು ನೀಡಿದ್ರು. ನಗರಸಭೆಯವರು ಫಾಗಿಂಗ್ ಮಾಡಿದ್ರು. ಸೊಳ್ಳೆಗಳನ್ನು ಕಂಟ್ರೋಲ್ ಮಾತ್ರ ಕಡಿಮೆ ಮಾಡಲು ಆಗುತ್ತಿಲ್ಲ. 

ಹೀಗಾಗಿ ರಾಯಚೂರು ನಗರದ ವಾರ್ಡ್ 5 ರಲ್ಲಿ ಇರುವ ನಿವೃತ್ತ ನೌಕರರು ಹಾಗೂ ಪ್ರಜ್ಞಾವಂತರ ತಂಡವೊಂದು ಸೊಳ್ಳೆಗಳ ಸಂತತಿಯನ್ನು ಸಂಪೂರ್ಣವಾಗಿ ನಾಶ ಮಾಡಲು ಹೊಸವೊಂದು ಪ್ಲಾನ್ ಮಾಡಿಕೊಂಡಿದ್ದಾರೆ. ಅದೂ ವೇಸ್ಟ್ ಆಗುವ ವಸ್ತುಗಳನ್ನು ಸುಟ್ಟು ಎಣ್ಣೆ, ಕಟ್ಟಿಗೆ ಪುಡಿ ಹಾಗೂ ಹಳೆಬಟ್ಟೆಗಳನ್ನು ಬಳಸಿಕೊಂಡು ನಿತ್ಯ ಕಾಟಕೊಡುವ ಸೊಳ್ಳೆಗಳ ನಾಶಕ್ಕೆ ಮುಂದಾಗಿದ್ದಾರೆ. ನಾವು ಈ ಪ್ರಯೋಗ ಮಾಡಿದ ಮೇಲೆ ನಮ್ಮ ವಾರ್ಡ್ನಲ್ಲಿ ಸೊಳ್ಳೆಗಳ ಸಂತತಿ ಕಡಿಮೆಯಾಗಿದೆ ಅಂತರೇ ಇಲ್ಲಿನ ಸ್ಥಳೀಯರು

(ವರದಿ: ರಾಯಚೂರಿನಿಂದ ಕ್ಯಾಮಾರಾಮೆನ್ ಶ್ರೀನಿವಾಸ್ ಜೊತೆ ಜಗನ್ನಾಥ ಪೂಜಾರ್, ಸುವರ್ಣನ್ಯೂಸ್)