10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು..!

- 10 ಗಂಟೆಯಲ್ಲಿ 20 ಎಕರೆ ಜಮೀನು ಉಳುಮೆ ಮಾಡಿದ ಇಬ್ಬರು ರೈತರು

- ರಾಯಚೂರು ಜಿಲ್ಲೆ ಮಾಡಿದ  ಮಾನವಿ ತಾ. ಕಪಗಲ್ ಗ್ರಾಮದ ರೈತರಾದ ಶಿವರಾಯ ಮತ್ತು ಮಹಾದೇವ ವಾಲೇಕಾರ್ ಸಾಹಸ

- ಸಾಹಸ ಮಾಡಿದ ರೈತರಿಗೆ ಜಮೀನಿನಲ್ಲಿಯೇ ಮಾಲೀಕ ಸೈಯದ್ ಉಸ್ಮಾನ್ ಸಾಬ್ ಸನ್ಮಾನ


 

First Published Sep 3, 2021, 4:30 PM IST | Last Updated Sep 3, 2021, 4:30 PM IST

ರಾಯಚೂರು (ಸೆ. 03): ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ರೈತರಿಬ್ಬರು ಸೇರಿ ಎತ್ತುಗಳ ಸಹಾಯದಿಂದ 10ಗಂಟೆಯಲ್ಲಿ 20 ಎಕರೆ ಜಮೀನು ಉಳಿಮೆ ಮಾಡಿದ್ದಾರೆ. ಇಂಥಾ ಸಾಹಸಗೈದ ರೈತರಿಗೆ ಜಮೀನಿನ ಮಾಲೀಕ ಸೈಯದ್ ಉಸ್ಮಾನ್ ಸಾಬ್ 5 ತೊಲೆ ಬೆಳ್ಳಿ ಖಡ್ಗ ಹಾಕಿ ಸನ್ಮಾನಿಸಲಾಯಿತು. 

ಅಡ್ವೆಂಚರ್‌ಗೆ ಮತ್ತೊಂದು ಹೆಸರೇ ಕ್ಯಾತನಮಕ್ಕಿ, ದುರ್ಗಮ ಹಾದಿಯಲ್ಲಿ ರೋಚಕ ಪಯಣ.!

 ಸಾಮಾನ್ಯವಾಗಿ 10 ಗಂಟೆಯಲ್ಲಿ ಎತ್ತುಗಳ ಸಹಾಯದಿಂದ 4-5 ಎಕರೆ ಜಮೀನು ಮಾತ್ರ ಉಳಿಮೆ ಮಾಡಬಹುದು. ಆದ್ರೆ ಕಪಗಲ್ ಗ್ರಾಮದ ರೈತರಾದ ಶಿವರಾಯ ಮತ್ತು ಮಹಾದೇವ್ ವಾಲೇಕರ್ ಸೇರಿ ಬೆಳಗಿನ ಜಾವ 3 ಗಂಟೆಯಿಂದ ನಿರಂತರವಾಗಿ 10 ಗಂಟೆಗಳ ಕಾಲ ಉಳಿಮೆ ಮಾಡಿ 20 ಎಕರೆ ಹತ್ತಿ ಜಮೀನು ಉಳಿಮೆ ಮಾಡಿದ್ದಾರೆ. ರೈತರ ಈ ಸಾಧನೆ ಕಂಡ ಗ್ರಾಮಸ್ಥರು ರೈತರಿಗೆ ಜಮೀನಿನಲ್ಲಿಯೇ ಸನ್ಮಾನಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿದರು.