Asianet Suvarna News Asianet Suvarna News

ಅಡ್ವೆಂಚರ್‌ಗೆ ಮತ್ತೊಂದು ಹೆಸರೇ ಕ್ಯಾತನಮಕ್ಕಿ, ದುರ್ಗಮ ಹಾದಿಯಲ್ಲಿ ರೋಚಕ ಪಯಣ.!

Sep 2, 2021, 6:13 PM IST
  • facebook-logo
  • twitter-logo
  • whatsapp-logo

ಚಿಕ್ಕಮಗಳೂರು (ಸೆ. 02): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ  ಪ್ರವಾಸಿಗರ ಪಾಲಿಗೆ ಹಾಟ್ ಸ್ಪಾಟ್ . ಇಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಕೈಬಿಸಿಕರೆಯುತ್ತಿದೆ. ಇದರ ಸಾಲಿಗೆ ದುರ್ಗಮ ಹಾದಿಯಲ್ಲಿ ಇರುವ ಕ್ಯಾತನಮಕ್ಕಿ ಕೂಡ ಒಂದು. ಮಲೆನಾಡಿನಲ್ಲಿ ಇರುವ ಕ್ಯಾತನಮಕ್ಕಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. 

ಮೂಡಿಗೆರೆಯಿಂದ 72 ಕಿಲೋ ಮೀಟರ್ ದೂರದಲ್ಲಿರುವ ಕ್ಯಾತನಮಕ್ಕಿ ಪ್ರವಾಸಿಗರ ಪಾಲಿಗೆ ಹಾಟ್‌ಸ್ಪಾಟ್. ಇಲ್ಲಿನ ಪ್ರಕೃತಿ ಸೌಂದರ್ಯ ಸ್ವರ್ಗವೇ ಎನ್ನುವಂತೆ ಭಾಸವಾಗುತ್ತೆ.  ಇಲ್ಲಿಗೆ ಹೋಗುವುದು ಕೂಡ ಒಂದು ಅಡ್ವೆಂಚರ್ ರೇಡ್. ಹೊರನಾಡು ಅನ್ನಪೂಣೇಶ್ವರಿ ದೇವಸ್ಥಾನ ಸಮೀಪವಿರುವ ಶೃಂಗೇರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸಾಗಬೇಕು, ದಾರಿಯ ಮಧ್ಯೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಎದುರಾಗಲಿದ್ದು, ಅಲ್ಲಿ ಹೆಸರು ನಮೂದಿಸಿ ಮುಂದೆ ಬಿಡಲಾಗುತ್ತದೆ. ನಂತರ ಆರಂಭವಾಗುವುದೇ ಜೀವನದ ಅತ್ಯಂತ ಭಯಾನಕ ಯಾತ್ರೆ! ಅರೇ, ನಾವೂ ಒಮ್ಮೆ ಟ್ರೈ ಮಾಡೋಣ ಅಂತೀರಾ.? ಹಾಗಾದ್ರೆ ಅಡ್ವೆಂಚರ್‌ ನೋಡಲೇಬೇಕು..!