ದ್ವಿತೀಯ PUC ಪರೀಕ್ಷೆ: ಮಾಸ್ಕ್ ಧರಿಸದ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಬೇಜವಾಬ್ದಾರಿ
ಬೆಳಗಾವಿ ಜಿಲ್ಲೆಯ 79 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಪ್ರಾರಂಭ| ಸಾಮಾಜಿಕ ಅಂತರ ಮರೆತ ವಿದ್ಯಾರ್ಥಿಗಳು| ಪರೀಕ್ಷೆಗೆ ಬಂದ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇಲ್ಲ|
ಬೆಳಗಾವಿ(ಜೂ.18): ಕೊರೋನಾ ಹಾವಳಿಯಿಂದ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಇಂದು(ಗುರುವಾರ) ಆರಂಭವಾಗಿದೆ. ಜಿಲ್ಲೆಯ 79 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಪ್ರಾರಂಭವಾಗಿದೆ. ನಗರದ ಸರ್ದಾರ್ ಪದವಿ ಪೂರ್ವ ಕಾಲೇಜಿನಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ.
ರಣಹೇಡಿ ಚೀನಾ ಸೊಕ್ಕಡಗಿಸಲು ನಮ್ಮ ನಿಮ್ಮೆಲ್ಲರ ಕೈಯಲ್ಲೇ ಇದೆ ದಿವ್ಯಾಸ್ತ್ರ..!
ಪರೀಕ್ಷೆಗೆ ಬಂದ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಲ್ಲ, ವಿದ್ಯಾರ್ಥಿಗಳೂ ಕೂಡ ಗುಂಪಾಗಿ ಕಾಲೇಜಿಗೆ ಆಗಮಿಸಿದ್ದಾರೆ. ಇಷ್ಟೆಲ್ಲಾ ಆದರೂ ಕಾಲೇಜು ಸಿಬ್ಬಂದಿ ಮಾತ್ರ ತಮಗೂ ಇದಕ್ಕ ಸಂಬಂಧವಿಲ್ಲ ಎಂಬಂತೆ ಬೇಜವ್ದಾರಿತನದಿಂದ ವರ್ತಿಸಿದ್ದಾರೆ.