ಸರ್ಕಾರಿ ಕಚೇರಿಯೇ ಇವರಿಗೆ ಸಿನಿಮಾ ಥಿಯೇಟರ್..!

ನಾಗಮಂಗಲದ ಲೋಕೋಪಯೋಗಿ ಇಲಾಖೆ ನೌಕರರು ಕಚೇರಿಯನ್ನೇ ಥಿಯೇಟರ್ ಮಾಡಿಕೊಂಡು ಸಿನಿಮಾ ನೋಡುತ್ತಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ. ಕೆಲಸದ ಗೊಡವೆಯೇ ಇಲ್ಲದ ಬೇಜಾಬವದಾರಿಯಾಗಿ ಆರಾಮವಾಗಿ ಕುಳಿತು ನೌಕರರು ಸಿನಿಮಾ ವೀಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ಸರ್ಕಾರಿ ಕಚೇರಿಯೇ ಇವರಿಗೆ ಸಿನೆಮಾ ಥಿಯೇಟರ್ ಆಗಿದೆಯಾ ಎಂಬ ಪ್ರಶ್ನೆ ಮೂಡುತ್ತದೆ.

First Published Jan 21, 2020, 12:35 PM IST | Last Updated Jan 21, 2020, 12:35 PM IST

ಮಂಡ್ಯ(ಜ.21): ನಾಗಮಂಗಲದ ಲೋಕೋಪಯೋಗಿ ಇಲಾಖೆ ನೌಕರರು ಕಚೇರಿಯನ್ನೇ ಥಿಯೇಟರ್ ಮಾಡಿಕೊಂಡು ಸಿನಿಮಾ ನೋಡುತ್ತಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ. ಕೆಲಸದ ಗೊಡವೆಯೇ ಇಲ್ಲದ ಬೇಜಾಬವದಾರಿಯಾಗಿ ಆರಾಮವಾಗಿ ಕುಳಿತು ನೌಕರರು ಸಿನಿಮಾ ವೀಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ಸರ್ಕಾರಿ ಕಚೇರಿಯೇ ಇವರಿಗೆ ಸಿನೆಮಾ ಥಿಯೇಟರ್ ಆಗಿದೆಯಾ ಎಂಬ ಪ್ರಶ್ನೆ ಮೂಡುತ್ತದೆ.

ಸರ್ಕಾರಿ ಕೆಲಸ ದೇವರ ಕೆಲಸವಲ್ಲ ಟೈಮ್ ಪಾಸ್ ಕೆಲಸ ಎಂಬಂತೆ ಇಲ್ಲಿನ ನೌಕರರು ವರ್ತಿಸಿದ್ದಾರೆ. ಸರ್ಕಾರಿ ನೌಕರರು ಕೆಲಸ ಮಾಡೋದು ಬಿಟ್ಟು ಸಿನೆಮಾ ವೀಕ್ಷಣೆ, ಹರಟೆಯಲ್ಲಿ ಕಾಲಹರಣ ಮಾಡಿದ್ದಾರೆ. ಪಡೆಯೋದು ಸರ್ಕಾರಿ ಸಂಬಳ, ಕಚೇರಿಯಲ್ಲಿ ಮಾಡೋದು ಟೈಮ್ ಪಾಸ್ ಎಂಬಂತಾಗಿದೆ ಇವರ ಕಥೆ. ನಾಗಮಂಗಲದ ಲೋಕೋಪಯೋಗಿ ಇಲಾಖೆ ನೌಕರರ ಬೇಜವಬ್ದಾರಿತನದ ವಿಡಿಯೋ ಸದ್ಯ ವೈರಲ್ ಆಗಿತ್ತಿದೆ.

ಅನುಮಾನಾಸ್ಪದ ಬ್ಯಾಗ್ ಪತ್ತೆ; ಯಾದಗಿರಿ ಬಸ್ ನಿಲ್ದಾಣದಲ್ಲಿ ಟೆನ್ಷನ್​..ಟೆನ್ಷನ್​..!.

ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಟೈಮ್ ಪಾಸ್ ಮಾಡಿದ ನೌಕರರು. ಸಹಾಯಕ ಇಂಜಿನಿಯರ್ ಮಧುಸೂದನ್, ಗುಮಾಸ್ತ ಶೇಷಾದ್ರಿ ಸೇರಿದಂತೆ ಕಚೇರಿಯ ಕೆಲ ನೌಕರರಿಂದ ಬೇಜವಬ್ದಾರಿತನ ತೋರಿಸಿದ್ದಾರೆ. ಕೆಲಸದ ವೇಳೆ ಚಲನಚಿತ್ರ ವೀಕ್ಷಣೆಯಲ್ಲಿ ನಿರತರಾಗಿದ್ದ ಸರ್ಕಾರಿ ನೌಕರರು ಕಚೇರಿಯ ಕಂಪ್ಯೂಟರ್ ಮತ್ತು  ಇಂಟರ್ನೆಟ್ ಬಳಸಿ ಸಿನಿಮಾ ನೋಡಿದ್ದಾರೆ. ಕಚೇರಿ ಸಿಬ್ಬಂದಿಗಳು ಸಿನಿಮಾ ವೀಕ್ಷಣೆ ಮಾಡ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೌಕರರ ಬೇಜವಬ್ದಾರಿತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.