ಹಾಸನದಲ್ಲೂ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ: ಚಿಕ್ಕಮಗಳೂರಲ್ಲೂ ಗೋ ಬ್ಯಾಕ್‌ ಪೋಸ್ಟ್

ಸಿದ್ದರಾಮಯ್ಯ ಕೊಡಗಿಗೆ ಭೇಟಿ ಕೊಟ್ಟ ವೇಳೆ ಹೆಜ್ಜೆ ಹೆಜ್ಜೆಗೂ ವಿರೋಧ ವ್ಯಕ್ತವಾಗಿತ್ತು. ಕೊಡಗಿನ ಬಳಿಕ ಚಿಕ್ಕಮಗಳೂರಿನಲ್ಲಿ ರಾತ್ರಿ ಪ್ರತಿಭಟನೆಯ ಬಿಸಿ ತಟ್ಟಿದೆ. 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು(ಆ.19): ಸಿದ್ದರಾಮಯ್ಯ ಅವರ ಹೇಳಿಕೆ ದಿನದಿಂದ ದಿನಕ್ಕೆ ಕಿಚ್ಚು ಹಚ್ಚುತ್ತಿದೆ. ಮುಸ್ಲಿಂ ಏರಿಯಾಗಳಲ್ಲಿ ಸಾರ್ವಕರ್‌ ಫೋಟೋ ಯಾಕೆ ಅಂತ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದರು. ಸಿದ್ದು ಕೊಟ್ಟ ಈ ಹೇಳಿಕೆಯ ವಿರುದ್ಧ ಹಿಂದೂ ಸಂಘಟನೆಗಳ ಕಿಚ್ಚು ಹೆಚ್ಚಾಗುತ್ತಿದೆ. ನಿನ್ನೆ ಸಿದ್ದರಾಮಯ್ಯ ಕೊಡಗಿಗೆ ಭೇಟಿ ಕೊಟ್ಟ ವೇಳೆ ಹೆಜ್ಜೆ ಹೆಜ್ಜೆಗೂ ವಿರೋಧ ವ್ಯಕ್ತವಾಗಿತ್ತು. ಕೊಡಗಿನ ಬಳಿಕ ಚಿಕ್ಕಮಗಳೂರಿನಲ್ಲಿ ರಾತ್ರಿ ಪ್ರತಿಭಟನೆಯ ಬಿಸಿ ತಟ್ಟಿದೆ. ಭಜರಂಗ ದಳದ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಕಾರನ್ನು ಅಡ್ಡಗಟ್ಟಲು ಪ್ರಯತ್ನಿಸಿದ್ದಾರೆ.

Related Video