ಖಾಸಗಿ ಕಾಲೇಜುಗಳಲ್ಲಿ ಡೊನೇಷನ್ ಟಾರ್ಚರ್: ಲಕ್ಷ-ಲಕ್ಷಕ್ಕೆ ಬೇಡಿಕೆ
ಶುಲ್ಕದ ಹೆಸರಿನಲ್ಲಿ ಖಾಸಗಿ ಕಾಲೇಜುಗಳ ಅಂಧಾ ದರ್ಬಾರ್ ನಡೆದಿದ್ದು, ಕೆಎಇ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಶುಲ್ಕದ ಹೆಸರಿನಲ್ಲಿ ಖಾಸಗಿ ಕಾಲೇಜುಗಳ ಹಾವಳಿ ಮಿತಿ ಮೀರಿದ್ದು, ಹೇಳುವವರು ಇಲ್ಲದಂತಾಗಿದೆ. ಡೊನೇಷನ್ ಹಾವಳಿಗೆ ಕಡಿವಾಣ ಹಾಕಲು ಸಿಇಟಿ ಪರೀಕ್ಷೆ ಹಾಗೂ ಉತ್ತಮ ರ್ಯಾಂಕ್ ಬಂದ್ರೂ ಡೊನೇಷನ್ ಟಾರ್ಚರ್ ತಪ್ಪಿಲ್ಲದಂತಾಗಿದೆ. ಎಂಬಿಎ, ಪಿಜಿ ಕೋರ್ಸ್‌ಗೆ ಕೆಇಎ 66 ಸಾವಿರ ಶುಲ್ಕ ನಿಗದಿ ಪಡಿಸಿದ್ದು, ಖಾಸಗಿ ಕಾಲೇಜುಗಳು 4ರಿಂದ 6 ಲಕ್ಷಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿ ಬಂದಿದೆ. ಫೀಸ್ ಬಗ್ಗೆ ಕೇಳಿದ್ರೆ ಪ್ಲೇಸ್‌ಮೆಂಟ್ ಕೋಚಿಂಗ್ ಅಂತ ಸಮಜಾಯಿಷಿ ನೀಡಲಾಗುತ್ತಿದೆ.