ಇಂದು ಕೆಂಪೇಗೌಡರ ಮೂರ್ತಿ ಅನಾವರಣ: ನಾಡಪ್ರಭು ಬೆಂಗಳೂರು ಕಟ್ಟಿದ್ದು ಹೇಗೆ?
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣಕ್ಕೆ, ಬೆಂಗಳೂರು ವಿಮಾನ ನಿಲ್ದಾಣ ಸಂಭ್ರಮದಿಂದ ಸಜ್ಜಾಗಿದೆ.
ಇಂದು ಕೆಂಪೇಗೌಡರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂತಹ ಕೆಂಪೇಗೌಡರ ಇತಿಹಾಸ ನಿಜಕ್ಕೂ ರೋಚಕ. ಕೆಂಪೇಗೌಡರು ಧೈರ್ಯ ಹಾಗೂ ಸಾಹಸಕ್ಕೆ ಹೆಸರಾದವರು. ಅವರು ಬೆಂಗಳೂರನ್ನು 1532ರಲ್ಲಿ 5 ವರ್ಷದಲ್ಲಿ ಬೆಂಗಳೂರನ್ನು ಕಟ್ಟಿದರು. 66 ಕುಲಕಸುಬು ತಂದು ನಾಡು ಕಟ್ಟಿದರು ನಾಡಪ್ರಭು. 40 ವರ್ಷಗಳ ಕಾಲ ಬೆಂಗಳೂರನ್ನು ಆಳಿದ ಅವರು 1608ರ ಯುದ್ಧದಲ್ಲಿ 98ನೇ ವಯಸ್ಸಿನಲ್ಲಿ ಮರಣ ಹೊಂದಿದರು.