'ನಮ್ಮ ಮೆಟ್ರೋ' ಜಾಲ ವಿಸ್ತರಣೆಗೆ ಸಿದ್ಧತೆ: ಬಿಎಂಟಿಸಿಗೆ ಬರೆ ಸಾಧ್ಯತೆ
ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ' ಜಾಲದ ವಿಸ್ತರಣೆ ಮಾಡಲು ಸಿದ್ಧತೆ ನಡೆದಿದ್ದು, ಬಿಎಂಟಿಸಿಗೆ ಪ್ರಯಾಣಿಕರ ಕೊರತೆಯ ಚಿಂತೆ ಕಾಡುತ್ತಿದೆ.
ಸಂಚಾರ ದಟ್ಟಣೆಯು ರಾಜಧಾನಿಯ ಜನತೆಯನ್ನು ಕಾಡುವ ಅತ್ಯಂತ ದೊಡ್ಡ ಸಮಸ್ಯೆ. ಸವಾರರು ತಾಸುಗಟ್ಟಲೆ ಸಮಯವನ್ನು ರಸ್ತೆಗಳಲ್ಲೇ ಕಳೆಯಬೇಕಾದ ಪರಿಸ್ಥಿತಿ ಬೆಂಗಳೂರಿನಲ್ಲಿದೆ. ಹಾಗಾಗಿ 'ನಮ್ಮ ಮೆಟ್ರೋ' ಜಾಲದ ವಿಸ್ತರಣೆ ಮಾಡಲಾಗುತ್ತಿದ್ದು, ಇದರಿಂದ ಬಿಎಂಟಿಸಿಗೆ ಪ್ರಯಾಣಿಕರ ಕೊರತೆಯ ಚಿಂತೆ ಎದುರಾಗಿದೆ. ಫೆಬ್ರುವರಿಯೊಳಗೆ ವೈಟ್ ಫೀಲ್ಡ್‌ನಲ್ಲಿ ನಮ್ಮ ಮೆಟ್ರೋ ಪ್ರಾರಂಭಕ್ಕೆ ಸಿದ್ಧತೆ ನಡೆದಿದ್ದು, ಮೆಟ್ರೋ ಆರಂಭವಾದರೆ ಬಿಎಂಟಿಸಿಗೆ ಜನ ಗುಡ್ ಬೈ ಹೇಳೀವ ಭೀತಿ ಎದುರಾಗಿದೆ. ಬಿಎಂಟಿಸಿಯ ವೋಲ್ವೋ ಬಸ್‌ಗಳು ಮೂಲೆ ಗುಂಪಾಗುವ ಸಾಧ್ಯತೆಯಿದ್ದು, ಈಗಾಗಲೇ 750 ವೋಲ್ವೋ ಬಸ್'ಗಳಲ್ಲಿ 500 ಬಸ್'ಗಳು ಮೂಲೆ ಗುಂಪಾಗಿವೆ.
Viveka Scheme: ವಿವೇಕ ಯೋಜನೆಯಿಂದ ಶಿಕ್ಷಣ ಕ್ರಾಂತಿ: ಸಚಿವ ಮುನೇನಕೊಪ್ಪ