Viveka Scheme: ವಿವೇಕ ಯೋಜನೆಯಿಂದ ಶಿಕ್ಷಣ ಕ್ರಾಂತಿ: ಸಚಿವ ಮುನೇನಕೊಪ್ಪ
ವಿವೇಕ ಯೋಜನೆ ರಾಜ್ಯದ ಬಹುದೊಡ್ಡ ಯೋಜನೆ ಈ ಮೂಲಕ ಶಿಕ್ಷಣ ಕ್ರಾಂತಿ ಮಾಡಲು ಸರ್ಕಾರ ಮುಂದಾಗಿದೆ. ಇದರ ಪ್ರಯೋಜನವನ್ನ ಪಡೆದುಕೊಂಡು ವಿದ್ಯಾರ್ಥಿಗಳ ಉನ್ನತಮಟ್ಟಕ್ಕೆ ಬೆಳೆಯಬೇಕೆಂದು ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ನ.15): ವಿವೇಕ ಯೋಜನೆ ರಾಜ್ಯದ ಬಹುದೊಡ್ಡ ಯೋಜನೆ ಈ ಮೂಲಕ ಶಿಕ್ಷಣ ಕ್ರಾಂತಿ ಮಾಡಲು ಸರ್ಕಾರ ಮುಂದಾಗಿದೆ. ಇದರ ಪ್ರಯೋಜನವನ್ನ ಪಡೆದುಕೊಂಡು ವಿದ್ಯಾರ್ಥಿಗಳ ಉನ್ನತಮಟ್ಟಕ್ಕೆ ಬೆಳೆಯಬೇಕೆಂದು ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಧಾರವಾಡ ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಐಆರ್‌ಡಿಎಫ್ ಅಡಿ ನಿರ್ಮಿಸಿದ ಎರಡು ಕೊಠಡಿ ಹಾಗೂ ವಿವೇಕ ಯೋಜನೆಯಲ್ಲಿ ಎರಡು ಕೊಠಡಿಗಳ ನಿರ್ಮಾಣಕ್ಕೆ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಭೂಮಿಪೂಜೆ ಸಲ್ಲಿಸಿ ಸಚಿವರು ಮಾತನಾಡುತ್ತಿದ್ದರು.
Viveka Scheme Politics: ವಿವೇಕ ಯೋಜನೆ ಅವಿವೇಕದ ಪರಮಾವಧಿ: ಕಾಂಗ್ರೆಸ್
ಸರಕಾರಿ ಶಾಲೆಗಳ ಅಭಿವೃದ್ಧಿ ಮೂಲಕ ಅಮರಗೋಳವನ್ನ ಮಾದರಿ ಗ್ರಾಮ ಮಾಡಲು ಮುಂದಾಗಿದ್ದು ಇದಕ್ಕೆ ನಿಮ್ಮೇಲರ ಆರ್ಶೀವಾದ ಇರಬೇಕೆಂದರು ಇಂತಹ ಕಮರ್ಷಿಯಲ್ ಸ್ಥಿತಿಯ ಸಮಯದಲ್ಲಿ ಪ್ರಮುಖವಾದ ಸ್ಥಳದಲ್ಲಿ 20 ಗುಂಟೆ ಜಾಗವನ್ನ ಶಾಲೆಗೆ ದಾನ ಮಾಡಿದ ಹೊಸಗೌಡರ ಕುಟುಂಬದವರಿಗೆ ಧನ್ಯವಾದ ಮತ್ತು ಅಭಿನಂದನೆಯನ್ನ ಸಚಿವರು ತಿಳಿಸಿದರು.
ನಾನು ಊರಿಗಾಗಿ ಅಲ್ಲ. ಊರಿಗಾಗಿ ನಾನು ಎಂಬ ಮನೋಭಾವನೆಯನ್ನ ಅಮರಗೋಳದ ಜನರುಹೊಂದಿರುವುದು ಅಭಿವೃದ್ಧಿಗೆ ಸಾಕಷ್ಟು ಸಹಕಾರಿಯಾಗಿದೆ ಎಂದರು. ದೇಶ ಮತ್ತು ವಿದೇಶದಲ್ಲೂ ಹೆಸರು ಮಾಡುವಂತಹದಕ್ಕೆ ಅಮರಗೋಳದ ವಿದ್ಯಾರ್ಥಿಗಳು ಮುಂದಾಗಬೇಕು. ಇಲ್ಲಿನ ಮಕ್ಕಳು ಬದಲಾವಣೆ ಹೊಂದಬೇಕು. ಪ್ರತಿಯೊಬ್ಬರಲ್ಲು ಬೆಳವಣಿಗೆ ಹೊಂದಬೇಕು ಎಂದರು.
ಸ್ವಾವಲಂಬಿ ಬದುಕಿಗೆ ಸ್ವ-ಸಹಾಯ ಸಂಘ ನೆರವು: ಸಚಿವ ಮುನೇನಕೊಪ್ಪ
ಅಮರಗೋಳದ ಶ್ರೀ ಸಿದ್ಧಾರೂಡ ಮಠದ ವೀರಭದ್ರೇಶ್ವರ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಶಾಲೆಗೆ ಭೂಮಿ ದಾನ ಮಾಡಿದ ಸೋಮಶೇಖರಗೌಡ ಕರಿಗೌಡ ಹೊಸಗೌಡ, ಸರ್ವಮಂಗಳಾ ಪಾಟೀಲ, ಸುಜಾತಾ ನಾಗನಗೌಡ ನಾಗನಗೌಡರ, ಬಿಜೆಪಿ ತಾಲೂಕು ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಾಡದ , ತಾಪಂ ಇಓ ಎಸ್.ಎಂ.ಕಾಂಬ್ಳೆ, ಬಿ.ಎಸ್.ಪಾಟೀಲ, ಎಂ.ಕೆ.ಮೋನಿ, ವೈ.ಎ.ಮುನೇನಕೊಪ್ಪ, ಎಂ.ಬಿ.ಹೊಸಗೌಡರ, ಐ.ಎಂ.ಕುಲಕರ್ಣಿ ಸೇರಿದಂತೆ ಗ್ರಾಪಂ ಅಧ್ಯಕ್ಷ, ಸದಸ್ಯರು ಸೇರಿದಂತೆ ಹಲವರು ಭಾಗಿಯಾಗಿದ್ದರು.