Asianet Suvarna News Asianet Suvarna News

ಗರ್ಭಿಣಿ ಹೆರಿಗೆಗೂ ಪರದಾಟ: ಮಗುವಿನ ಅರ್ಧ ಕಾಲು ಹೊರಬಂದ್ರೂ ವೈದ್ಯರೇ ಇಲ್ಲ..!

*   ಗರ್ಭಿಣಿಯನ್ನ ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆ ಹಿಂದೇಟು
*  ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಿಂದ ಬಂದ ತುಂಬು ಗರ್ಭಿಣಿ
*  ಜಿಲ್ಲಾಸ್ಪತ್ರೆಯಲ್ಲಿಯೂ ವೈದ್ಯರಿಲ್ವಂತೆ? 

ವಿಜಯಪುರ(ಮೇ.17):  ಮಹಾಮಾರಿ ಕೊರೋನಾದಿಂದಾಗಿ ಗರ್ಭಿಣಿಯನ್ನ ದಾಖಲಿಸಿಕೊಳ್ಳಲು ವೈದ್ಯರು ಹಿಂದೇಟು ಹಾಕಿದ ಘಟನೆ ನಗರದಲ್ಲಿ ಇಂದು(ಸೋಮವಾರ) ನಡೆದಿದೆ. ಜಿಲ್ಲೆಯ ಬಬಲೇಶ್ವರ ಪಟ್ಟಣದಿಂದ ಬಂದ ತುಂಬು ಗರ್ಭಿಣಿಯನ್ನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಿಲ್ಲ ಅಂತ ಹೇಳಿ ಕಳುಹಿಸಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಯಲ್ಲೂ ವೈದರಿಲ್ಲ ಅಂತ ಗರ್ಭಿಣಿಯನ್ನ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಇದರಿಂದ ಗರ್ಭಿಣಿಯ ತಾಯಿ ಆಸ್ಪತ್ರೆಯ ಮುಂದೆ ಕಣ್ಣೀರಿಡುತ್ತಾ ತಮ್ಮ ಸಂಕಟವನ್ನ ಹೇಳಿಕೊಂಡಿದ್ದಾರೆ. 

ಕೊರೋನಾ ಮಧ್ಯೆ ಶಾಕ್‌ ಕೊಟ್ಟ ವೈದ್ಯರು..?

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Video Top Stories