ಕೊರೋನಾ ವೈರಸ್ ಕಾಟಕ್ಕೆ ನೆಲಕಚ್ಚಿದ ಕೋಳಿ ಫಾರಂ ಉದ್ಯಮ
ಕೊರೋನಾ ವೈರಸ್ ಜೊತೆಗೆ ಕಾಣಿಸಿಕೊಂಡ ಹಕ್ಕಿ ಜ್ವರ| ಕೋಳಿ ಮಾಂಸ ಖರೀದಿ ಮಾಡಲು ಹಿಂದೇಟು ಹಾಕುತ್ತಿರುವ ಚಿಕನ್ ಪ್ರಿಯರು| ಮೀನು, ಮಟನ್‌ಗೆ ಭಾರೀ ಬೇಡಿಕೆ| ಕಂಗಾಲಾದ ಕೋಳಿ ಫಾರಂ ಮಾಲೀಕರು|
ಬೆಂಗಳೂರು(ಮಾ.19): ರಾಜ್ಯದಲ್ಲಿ ಕೊರೋನಾ ವೈರಸ್ ಭಯದ ಜೊತೆಗೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಇದರಿಂದ ಚಿಕನ್ ಪ್ರಿಯರು ಕೋಳಿ ಮಾಂಸ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಕೋಳಿ ಫಾರಂ ಮಾಲೀಕರು ಕೂಡ ಸಾವಿರಾರು ಕೋಳಿಗಳನ್ನ ಜೀವಂತ ಸಮಾಧಿ ಮಾಡಿದ್ದಾರೆ. ಇದರಿಂದ ರಾಜ್ಯಾದ್ಯಂತ ಕೋಳಿ ಫಾರಂ ಮಾಲೀಕರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಕೊರೋನಾ ಭೀತಿ: ಚೀನಾದ ವುಹಾನ್‌ನಂತೆ ಕಲಬುಗಿಯಲ್ಲೂ ದಿಗ್ಬಂಧನ!
ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಜನರು ಚಿಕನ್ ತಿನ್ನಲು ಹಿಂದೇಟು ಹಾಕುತ್ತಿದ್ದಾರೆ. ಇದರ ಮಧ್ಯೆ ಮೀನು, ಮಟನ್‌ಗೆ ಭಾರೀ ಬೇಡಿಕೆ ಬಂದಿದೆ. ಇದರಿಂದ ಮೀನು ಮತ್ತು ಮಟನ್ ದರ ಗಗನಕ್ಕೇರಿದೆ. ಒಂದು ಕೆಜಿ ಮಟನ್‌ಗೆ ಸಾವಿರ ರೂ. ಆಗುತ್ತದೆ ಎನ್ನಲಾಗುತ್ತಿದೆ.