Asianet Suvarna News Asianet Suvarna News

8 ವರ್ಷವಾದ್ರೂ ಮುಗಿದಿಲ್ಲ ಕಾಮಗಾರಿ: ಸೋಮವಾರಪೇಟೆ ಹಾಕಿ ಕ್ರೀಡಾಂಗಣ ಈಗ ಪುಂಡರ ತಾಣ!

ಹಚ್ಚ ಹಸಿರ ಹೊದಿಕೆ ಹೊದ್ದು ಮಲಗಿರುವ ಆಕರ್ಷಕ ಕ್ರೀಡಾಂಗಣ. ಇದು ಆಸ್ಟ್ರೋ ಟರ್ಫ್ (Astro Turf) ಅಳವಡಿಸಿರೋ ಹಾಕಿ ಕ್ರೀಡಾಂಗಣ ಅನ್ನೋದು ಯಾರಿಗೂ ಅರಿವಾಗುತ್ತೆ. ಆದ್ರೆ ಈ ಕ್ರೀಡಾಂಗಣ ಆಡವಾಡಲು ಮಾತ್ರ ಲಭ್ಯವಿಲ್ಲ. 

ಹಚ್ಚ ಹಸಿರ ಹೊದಿಕೆ ಹೊದ್ದು ಮಲಗಿರುವ ಆಕರ್ಷಕ ಕ್ರೀಡಾಂಗಣ. ಇದು ಆಸ್ಟ್ರೋ ಟರ್ಫ್ (Astro Turf) ಅಳವಡಿಸಿರೋ ಹಾಕಿ ಕ್ರೀಡಾಂಗಣ ಅನ್ನೋದು ಯಾರಿಗೂ ಅರಿವಾಗುತ್ತೆ. ಆದ್ರೆ ಈ ಕ್ರೀಡಾಂಗಣ ಆಡವಾಡಲು ಮಾತ್ರ ಲಭ್ಯವಿಲ್ಲ. ಯಾಕಂದ್ರೆ ಈ ಅಂಗಣದ ಕಾಮಗಾರಿಯೇ ಮುಕ್ತಾಯವಾಗಿಲ್ಲ. ಅದೂ ಕೂಡ ಎಂಟು ವರ್ಷಗಳ ಸುಧೀರ್ಘ ಅವಧಿಯ ಬಳಿಕವೂ. ಅಂದ ಹಾಗೆ ಇದು ಹಾಕಿ ತವರು ಕೊಡಗಿನ  (Kodagu) ಸೋಮವಾರಪೇಟೆ ನಗರದಲ್ಲಿರೋ ಅಸ್ಟ್ರೋ ಟರ್ಫ್ ಕಾಮಗಾರಿ. 

ಇದೇ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ (Appacchu Ranjan) ಕ್ರೀಡಾ ಸಚಿವರಾಗಿದ್ದಾಗ ಸೋಮವಾರಪೇಟೆಗೆ ಈ ಗ್ರೌಂಡನ್ನ ಸ್ಯಾಂಕ್ಷನ್ ಮಾಡಿಸುತ್ತಾರೆ. ಆದ್ರೆ ವಿಪರ್ಯಾಸ ಅಂದ್ರೆ  ಕಳೆದ ಎಂಟು ವರ್ಷಗಳಿಂದ ಇದರ ಕಾಮಗಾರಿ ಕುಂಟುತ್ತಲೇ ಸಾಗಿದೆ. ಹೈದ್ರಾಬಾದ್ ಮೂಲದ ಸಂಸ್ಥೆಯೊಂದು ಇದರ ಕಾಮಗಾರಿ ನಡೆಸುತ್ತಿದ್ದು ಬಹಳಷ್ಟು ಕಳಪೆಯಿಂದ ಕೂಡಿದೆ ಎಂಬ ಆರೋಪವಿದೆ. ಕ್ರೀಡಾಂಗಣದ ಸುತ್ತ ಮುತ್ತ ಇನ್ನೂ ನಿಧಾನಗತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಅಲ್ಲಿ ಯಾವುದೇ ಭದ್ರತೆಯೂ ಇಲ್ಲ. ರಾತ್ರಿ ವೇಳೆ ಪಶುಗಳು ಓಡಾಡುವುದರ ಜೊತೆಗೆ ಪುಂಡರು ಕೂಡ ಇಲ್ಲಿ ಸ್ವೇಚ್ಛಾಚಾರದಿಂದ ವರ್ತಿಸುತ್ತಾರೆ ಎಂಬ ಆರೋಪವಿದೆ.

ಈ ಕ್ರೀಡಾಂಗಣದಲ್ಲಿ ಭಾರತ ಹಾಕಿ ತಂಡದ ನಾಯಕರಾಗಿದ್ದ ಅರ್ಜುನ್ ಹಾಲಪ್ಪ, ಎಸ್ವಿ ಸುನಿಲ್ ಆಡಿ ಬೆಳೆದವರು. ಹಾಗೆಯೇ ಭಾರತ ಹಾಕಿ ತಂಡವನ್ನು ಪ್ರತನಿಧಿಸಿದ್ದ ಗೋವಿಂದ್, ವಿಎಸ್ ವಿನಯ್ ಸೇರಿದಂತೆ ನೂರಾರು ಕ್ರೀಡಾಪಟುಗಳಿಗೆ ಇದೇ ಕ್ರೀಡಾಂಗಣ ತವರಾಗಿದೆ. ಇಷ್ಟೊಂದು ಆಟಗಾರರನ್ನ ದೇಶಕ್ಕೆ ನೀಡಿದ ಈ ಕ್ರೀಡಾಂಗಣ ಇಂದು ಯಾರಿಗೂ ಉಪಯೋಗವಾಗದೆ ಹೀಗೆ ಬಿದ್ದಿರುವುದು ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ಥಳೀಯ ಶಾಸಕ ಅಪ್ಪಚ್ಚು ರಂಜನ್ ಇದೇ ಊರಿನವರಾಗಿದ್ದಾರೆ. ಆದ್ರೆ ಕಳೆದ ಎಂಟು ವರ್ಷಗಳಿಂದ ಈ ಯೋಜನೆ ಕುಂಟುತ್ತಾ ಸಾಗಿದ್ರೂ, ಇವರೂ ಕೂಡ ಅದನ್ನ ಗಟ್ಟಿಯಾಗಿ ಪ್ರಶ್ನಿಸುವ  ಧೈರ್ಯ ಮಾಡಿಲ್ಲ ಅಂತ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂಟು ವರ್ಷಗಳಲ್ಲಿ ಆಗದ ಯೋಜನೆ ಇನ್ಯಾವತ್ತು ಆಗುತ್ತೋ ಅಂತ ಸ್ಥಳೀಯ ಹಾಕಿಪಟುಗಳು ಕಾಯುವಂತಾಗಿದೆ.

 

 

Video Top Stories