
ಕೋವಿಡ್ ಕೇರ್ ಸೆಂಟರ್‌ನಿಂದ ಪೊಲೀಸ್ ಪೇದೆ ನಾಪತ್ತೆ..!
ಪೊಲೀಸ್ ಪೇದೆ ಜುಲೈ 27ರಂದು ರಾಂಪುರದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿದ್ದರು. ಇದಾಗಿ ಎರಡನೇ ದಿನದಲ್ಲಿ ಪೇದೆ ಕೇರ್ ಸೆಂಟರ್‌ನಿಂದ ಕಾಲ್ಕಿತ್ತಿದ್ದಾರೆ. ಈಗ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಕುರಿತಂತೆ ರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿತ್ರದುರ್ಗ(ಜು.30): ಕೊರೋನಾ ಸೋಂಕಿಗೆ ತುತ್ತಾಗಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಪೇದೆ ನಾಪತ್ತೆಯಾಗಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಎಂಬಲ್ಲಿ ನಡೆದಿದೆ.
ಆರೋಗ್ಯ ಅಧಿಕಾರಿಗಳು ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಸೋಂಕಿತ ಪೇದೆ ಕೋವಿಡ್ ಕೇಂದ್ರದಲ್ಲಿ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ತಾನೇ ಕಾರಿನಲ್ಲಿ ಏಕಾಂಗಿಯಾಗಿ ಬಳ್ಳಾರಿಗೆ ಹೋಗಿ ಬಂದಿರುವುದಾಗಿ ಒಪ್ಪಿಕೊಂಡಿದ್ದರೆ.
ಕೋವಿಡ್ ಆಸ್ಪತ್ರೆಯಲ್ಲಿ ನರ್ಸ್‌ಗಳೇ ಇಲ್ಲ..!
25 ಕಿಲೋ ಮೀಟರ್ ದೂರದ ಬಳ್ಳಾರಿಗೆ ಸೋಂಕಿತ ಪೇದೆ ಎಸ್ಕೇಪ್ ಆಗಿದ್ದರು. ಬಳಿಕ ಅವರನ್ನು ವಾಪಾಸ್ ಕರೆಸುವಲ್ಲಿ ರಾಂಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.